ಬೆಂಗಳೂರು: ಖ್ಯಾತ ಚಿತ್ರ ನಿರ್ಮಾಪಕ ಕೋಟಿ ರಾಮು ಎಂದೇ ಹೆಸರಾಗಿದ್ದ ರಾಮು ಕೊರೋನಾಕ್ಕೆ ಬಲಿಯಾಗಿದ್ದಾರೆ.ಅವರಿಗೆ (52 ವರ್ಷ) ವಯಸ್ಸಾಗಿತ್ತು.ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಹಿದ್ದಾರೆ. ಇವರ ಸಾವಿನ ಸುದ್ದಿ ಕೇಳಿ ಹಲವು ನಿರ್ದೇಶಕರು ಚಿತ್ರನಟರು ಭಾವುಕರಾಗಿದ್ದು ಕನ್ನಡ ಚಲನಚಿತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಅನೇಕ ಕನ್ನಡ ಚಿತ್ರಗಳಾದ ನಿರ್ದೇಶನ ಮಾಡಿರುವ. ಏ.ಕೆ .47 , ತವರಿನ ಸಿರಿ , ಮಲ್ಲ , 99, ಗೋಲಿಬಾರ್ , ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಾಮು ಅವರ ಸಾವು ಕನ್ನಡ ಚಿತ್ರ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಕಲಾವಿದರು ಕಂಬನಿ ಮಿಡಿದಿದ್ದಾರೆ.