ಪಿಎಸ್ಐ ವಿಜಯ ಕೃಷ್ಣ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಶಾಸಕರಿಗೆ ದೂರುಸಲ್ಲಿಸಿದ ನಗರ ಸಭೆ ಪೌರಾಯುಕ್ತ: ಆರ್.ವಿರೂಪಾಕ್ಷ ಮೂರ್ತಿ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:

ರಾಯಚೂರು ಜಿಲ್ಲೆ

ಸಿಂಧನೂರು: ನಗರಠಾಣೆಯ ಪೋಲಿಸ್ ಪಿಎಸ್ಐ ವಿಜಯ ಕೃಷ್ಣ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಶಾಸಕ ವೆಂಕಟರಾವ್ ನಾಡಗೌಡ ರವರಿಗೆ ದೂರ ಸಲ್ಲಿಸಿದ ನಗರ ಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ.

ನಗರದ ತಹಶಿಲ್ ಕಚೇರಿಯಲ್ಲಿ ಮಾಜಿ ಸಚಿವ. ಶಾಸಕ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ  ಕಿರಾಣಿ ವರ್ತಕರ ಸಂಘ,ಹೋಟೆಲ್ ಸಂಘ,ಔಷದ ಅಂಗಡಿಗಳ ಸಂಘ,ಗೊಬ್ಬರ ಅಂಗಡಿಗಳ ಸಂಘ, ಎ.ಪಿ.ಎಂ.ಸಿ ಕಾರ್ಯದರ್ಶಿಗಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಕಾರ್ಮಿಕರಿಗೆ ಪಾಸು ವಿತರಣೆ ಬಗ್ಗೆ ಕೊವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಭೆಯನ್ನು ಕರೆಯಲಾಗಿತ್ತು.ನಗರದಲ್ಲಿ ಅತಿಹೆಚ್ಚು ಜನದಟ್ಟಣೆ ಸೇರುವ ಕನಕದಾಸ ವೃತ್ತದಲ್ಲಿ ಇರುವ ಕಾಯಿಪಲ್ಯ ಮಾರುಕಟ್ಟೆ ಸ್ಥಳಾಂತರ ಮಾಡಲು ಸಭೆಯಲ್ಲಿ ಚರ್ಚೆಗೆ ಬಂದಿದ್ದೆ ತಡ.ಈ ಕುರಿತು ನಗರ ಸಭೆಯ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ ಮಾತನಾಡಿ ಕಾಯಿಪಲ್ಯ ಮಾರುಕಟ್ಟೆ ಸ್ಥಳಾಂತರ ಮಾಡುವ ಸಲುವಾಗಿ ನಾನು ನಗರ ಪೋಲಿಸ್ ಠಾಣೆಯ ಪಿಎಸ್ಐ ವಿಜಯ ಕೃಷ್ಣ ರವರಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಯಾವ ಒಬ್ಬ ಪೋಲಿಸ್ ಸಿಬ್ಬಂದಿ ಯನ್ನು ಕಳಿಸಿಲ್ಲ ಎಂದು ಶಾಸಕ ವೆಂಕಟರಾವ್ ನಾಡಗೌಡ ಅವರ  ಮುಂದೆ ಸಬೇಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಕೂಡಲೇ ಶಾಸಕ ವೆಂಕಟರಾವ್ ನಾಡಗೌಡ ಸಿಪಿಐ ಶ್ರೀಕಾಂತ್ ರವರಿಗೆ ಕಾಲ್ ಮಾಡಿ ಕೂಡಲೇ ಕನಕದಾಸ ವೃತ್ತದಲ್ಲಿ ಇರುವ ಕಾಯಿಪಲ್ಯ ಮಾರುಕಟ್ಟೆ ಸ್ಥಳಾಂತರ ಮಾಡಲು ಸೂಚನೆ  ನೀಡಿದರು.

Share and Enjoy !

Shares