.ವಿಜಯನಗರ ವಾಣಿ ಸುದ್ದಿ :
ಕೊಟ್ಟೂರು :ಶೀಘ್ರದಲ್ಲಿ 1000 ಆಕ್ಸಿಜನ್ ಬೆಡ್ ನಿರ್ಮಿಸಲು ಜಿಲ್ಲೆಯ ಜಿಂದಾಲ್ ಕಂಪನಿಗೆ ಸರ್ಕಾರ ಸೂಚಿಸಿದೆ.ಎಂದು ಜಿಲ್ಲಾ ಉಸ್ತುವಾರಿ ಹಾಗು ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ತಿಳಿಸಿದರು.
ಅವರು ಇಂದು ಮಧ್ಯಾಹ್ನ ಕೊಟ್ಟೂರು ತಾಲ್ಲೂಕು ಕಚೇರಿಯಲ್ಲಿ ಜಿಲ್ಲೆಯ ಅಧಿಕಾರಿಗಳನ್ನೊಳಗೊಂಡ ಕೋವಿಡ್ ಮುಂಜಾಗ್ರತ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರೋನ ಎರಡನೇ ಅಲೆ ರಾಜ್ಯದಲ್ಲಿ ತಾಂಡವವಾಡುತ್ತಿದ್ದು ಈ ಸಂದರ್ಭದಲ್ಲಿ ಸೋಂಕಿತರಿಗೆ ಆಕ್ಸಿಜೆನ್ ಕೊರತೆ ಉಂಟಾಗದಂತೆ ಸರ್ಕಾರ ಈಗಾಗಲೇ ಕ್ರಮ ಕೈ ಗೊಂಡಿದ್ದು,ಎಲ್ಲಾ ಅಧಿಕಾರಿ ವರ್ಗದವರು ಹಾಗು ಆರೋಗ್ಯ ಸಿಬ್ಬಂದಿಗಳು ಮೈ ಮರೆಯದೆ ತಮ್ಮ ಕರ್ತವ್ಯ ನಿಬಾಯಿಸಿ ಎಂದು ಸೂಚಿಸಿದರು.ಇದೇ ವೇಳೆ ತಾ.ಅರೋಗ್ಯ ಅಧಿಕಾರಿ ಷಣ್ಮುಖ ನಾಯ್ಕ್ ತಾಲ್ಲೂಕಿನಲ್ಲಿ 32 ಪ್ರಕರಣಗಳು ದಾಖಲಾಗಿದ್ದು ಹೋಮ್ ಐಸೋಲೇಷನ್ ಹೊಂದಿರುವವರನ್ನು ನಿಗಾ ವಹಿಸಲಾಗಿದೆ.ಎಂದುವರದಿ ನೀಡಿದರು.
ಜಿಲ್ಲಾಅರೋಗ್ಯ ಅಧಿಕಾರಿ ಜನಾರ್ಧನ್ ಹಾಜರಿದ್ದು ಸಲಹೆ ನೀಡಿದರು. ನಾಗರೀಕರು ತಪ್ಪದೆ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.ಮುಖ್ಯಾದಿಕಾರಿ ಪಟ್ಟಣದಲ್ಲಿ ಇಲ್ಲಿಯವರೆಗೆ 3.49.000 ರೂಪಾಯಿಗಳನ್ನು ಸರ್ಕಾರಿ ನಿಯಮ ಉಲ್ಲಂಘನೆ ರೂಪದಿಂದ ಪಡೆಯಲಾಗಿದೆ.ಮತ್ತು ಪಟ್ಟಣದ ಸ್ವಚ್ಛತೆಗೆ ಶ್ರಮಿಸುವುದಾಗಿ ಸಭೆಗೆ ತಿಳಿಸಿದರು.
ಇದೆ ವೇಳೆ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದ ಅವ್ಯವಸ್ತೆ ಬಗ್ಗೆ ಗರಂ ಆದ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದರು.ವಿವಿಧ ವಾರ್ಡಗಳಲ್ಲಿ ರೋಗಿಗಳನ್ನು ಯೋಗಕ್ಷೇಮ ವಿಚಾರಿಸಿದರು.ಮತ್ತು ಸೌಲಭ್ಯ,ಕುಂದು ಕೊರತೆ ಸರಿಪಡಿಸಲು ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದರು.ವಿಜಯನಗರ ಜಿಲ್ಲೆಯ ವಿಶೇಷಾದಿಕಾರಿ ಅನಿರುದ್ದ್ ಶ್ರವಣ್,ಜಿಲ್ಲಾಧಿಕಾರಿ ಪವನ್ ಕುಮಾರ್,ಸಹಾಯಕ ಆಯುಕ್ತ ಚಂದ್ರಶೇಖರಯ್ಯ ತಹಶೀಲ್ದಾರ್ ಅನಿಲ್ ಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಲ ಸಿದ್ದಪ್ಪ ಪೂಜೇರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಬಾಗವಹಿಸಿದ್ದರು.