ಕೇವಲ ದಾಖಲೆಗೋಸ್ಕರ ಸಚಿವ ಸಂಪುಟ ಆಗಬಾರದು ಆಂದ್ರಪ್ರದೇಶದ ದಂತೆ ದೃಡ ನೀರ್ದಾರ ತೆಗೆದು ಕೊಳ್ಳಲು ಸರ್ಕಾರಕ್ಕೆ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ) ಆಗ್ರಹ

Share and Enjoy !

Shares

ಬೆಂಗಳೂರು: ಯಾವುದೇ ಮುಖ್ಯಮಂತ್ರಿ ತನ್ನ ರಾಜ್ಯದ ಜನರ ಆರೋಗ್ಯವೇ ನಮ್ಮ ಸರ್ಕಾರದ ಜವಾಬ್ದಾರಿ ನಮ್ಮ ಹೊಣೆ, ಎಂದು ಯಾವುದನ್ನೂ ಲೆಕ್ಕಿಸದೇ ಯೋಚಿಸದೇ ನಿಂತ ಹೆಜ್ಜೆಯಲ್ಲಿ ಆಂಧ್ರಪ್ರದೇಶದ ಜನರ ಆರೋಗ್ಯದ ರಕ್ಷಣೆಗೋಸ್ಕರ ಕೊರೋನಾದಿಂದ ಮುಕ್ತರಾಗಲು ಈ ವರ್ಷದ ಅಯವ್ಯಯದ ಬಹುಪಾಲು ಹಣವನ್ನು ಕೊರೋನಾ ನಿವಾರಿಸಲು ನೀಡಿ ತನ್ನ ರಾಜ್ಯದ ಜನರ ಆರೋಗ್ಯವೇ ನನಗೆ ಮುಖ್ಯ ಎಂದು ಘೋಷಣೆ ಮಾಡಿದ ಆಂಧ್ರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಜಗನ್ ಮೋಹನ್ ರೆಡ್ಡಿ ಯವರಿಗೆ ಜನತೆಯ ಪರವಾಗಿ ಕೋಟಿ ಕೋಟಿ ಹೃದಯ ತುಂಬಿದ ಅಭಿನಂದನೆಗಳು. ಅದರಂತೆ ಕರ್ನಾಟಕದಲ್ಲಿಯೂ ಸಹ ಮುಖ್ಯಮಂತ್ರಿಗಳು ಈ ದಿನ ಸಚಿವ ಸಂಪುಟದಲ್ಲಿ ಕೊರೋನಾಗೆ ಉಚಿತ ಚಿಕಿತ್ಸೆ ಕಲ್ಪಿಸುವ ದಿಟ್ಟ ನಿರ್ಧಾರ ಪ್ರಕಟಣೆ ಮಾಡಬಹುದು ಎಂದು ಜನರು ತುಂಬಾ ನಿರೀಕ್ಷೆಯಲ್ಲಿದ್ದಾರೆ.ರಾಜ್ಯದಲ್ಲಿ ಕೊರೋನಾ ಪೀಡಿತರಿಗೆ ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಅಂಬುಲೆನ್ಸ್ , ಬೆಡ್, ಆಕ್ಸಿಜನ್, ವೆಂಟಿಲೇಟರ್, ಐಸಿಯು, ವ್ಯಾಕ್ಸಿನ್, ರೆಮಿಡಿಸವೇರ್ ಇಂಜೆಕ್ಷನ್ , ನಂತರ ಚಿಕಿತ್ಸೆಯು ಫಲಿಸದೇ ರೋಗಿ ಸಾವಿಗೀಡಾದಾಗ ಚಿತಾಗಾರ ಅಥವಾ ಸ್ಮಶಾನದಲ್ಲಿ ಸರಿಯಾದ ವ್ಯವಸ್ಥೆಯನ್ನು ತರಲು ಇದುವರೆಗೆ ಸರ್ಕಾರ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ,ಈ ದಿನ ಕಾಟಾಚಾರದ ಸಚಿವ ಸಂಪುಟ ಮಾಡದೇ ದಿಟ್ಟ ನಿರ್ಧಾರದೊಂದಿಗೆ ರಾಜ್ಯದ ಕೊರೋನಾ ಪೀಡಿತ ಜನರಿಗೆ ರಾಜ್ಯದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳನ್ನು ಸರ್ಕಾರ ಘೋಷಣೆ ಮಾಡಲು ಅಗ್ರಹಿಸುವೆ.ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಕೊರೋನಾ ರೋಗಿಯಾಗಿ ದಾಖಲಾಗಿ ನೂರಾರು ಕೊರೋನಾ ರೋಗಿಗಳ ಜೊತೆಯಲ್ಲೇ ಇದ್ದು ಅವರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಾದ ತಮ್ಮ ಮುಂದಿಟ್ಟಿರುವೆ. ರಾಜ್ಯದ ಮುಖ್ಯಮಂತ್ರಿಯಾಗಿ ಜನರನ್ನು ರಕ್ಷಿಸುವ ದಿಟ್ಟ ತೀರ್ಮಾನ ನಿಮ್ಮದು ಎಂದುತುರುವೇಕೆರೆ ಕ್ಷೇತ್ರ ಮಾಜಿ ಶಾಸಕಾರಾದ ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ)ಅಧ್ಯಕ್ಷರು – ಹಿಂದುಳಿದ ವರ್ಗಗಳ ವಿಭಾಗ. ಪ್ರದೇಶ ಕಾಂಗ್ರೆಸ್ ಸಮಿತಿ. ಅಧ್ಯಕ್ಷರು – ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.ಇವರು ಪತ್ರಿಕಾ ಮಾದ್ಯಮಗಳ ಮೂಲಕ ಆಗ್ರಹಿದ್ದಾರೆ.

Share and Enjoy !

Shares