ಗುಳೆ ಹೋದವರು ಮರಳಿ ಗೂಡಿಗೆ, ಹಳ್ಳಿಗರಲ್ಲಿ ಆತಂಕ ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನಲ್ಲಿ ಕೊರೋನ ಸೊಂಕೀತರ ಸಂಖ್ಯೆ ದಿನೇ ದಿನೇ ಏರು ಗತಿಯಲ್ಲಿ ಸಾಗಿದ್ದು ಪ್ರತಿ ದಿನ ಕೋವಿಡ್ ಪ್ರಕರಣಗಳು ಎರಡಂಕಿ ಗಡಿ ದಾಟುತ್ತಿವೆ. ಸಾಲದು ಎಂಬಂತೆ ತಾಲ್ಲೂಕಿನಲ್ಲಿ ಈಗ ಮತ್ತೊಂದು ತಲೆನೋವು ಶುರುವಾಗಿದೆ. ಅಂತರ್ ಜಿಲ್ಲೆ ಅಂತರ್ ರಾಜ್ಯ ಗುಳೆ ಹೋದವರು ಈಗ ಸ್ವಗ್ರಾಮಕ್ಕೆ ಮರಳುತ್ತಿದ್ದು ಜಿಲ್ಲೆಯಲ್ಲಿ ಸೊಂಕಿನ ಭೀತಿ ಎದುರಾಗಿದೆ. ಲಿಂಗಸೂಗೂರು ತಾಲ್ಲೂಕಿನವರು ಮಹಾರಾಷ್ಟ್ರ ಗೋವಾ ಬೆಂಗಳೂರಿಗೆ ಮಂಗಳೂರು ಸೇರಿದಂತೆ ಅಂತರ್ ಜಿಲ್ಲೆ ಅಂತರ್ ರಾಜ್ಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೋದವರಿದ್ದಾರೆ. ಕೊರೋನ ಎರಡನೇ ಅಲೆಯ ಭಯದಲ್ಲಿ ಮತ್ತೆ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಹೊರಗಿನಿಂದ ಬರುವವರಿಗೆ ತಾಲ್ಲೂಕಿನಲ್ಲಿ ಸೂಕ್ತ ತಪಾಷಣೆ ನಡೆಯುತ್ತಿಲ್ಲ, ಬಸ್ ಖಾಸಗಿ ವಾಹನದಲ್ಲಿ ಸಾಮಾಜಿಕ ಅಂತರ ಮಾಸ್ಕ್ ಹಾಕದೆ ಗುಂಪು ಗುಂಪಾಗಿ ಪ್ರಯಾಣಿಸುತ್ತಿದ್ದು ತಾಲ್ಲೂಕು ಆಡಳಿತ ಎಷ್ಟೇ ಹೇಳಿದರೂ ಜನ ಮಾತ್ರ ಕೋವಿಡ್ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ನೆಮ್ಮದಿಯಿಂದ ಇದ್ದವರಿಗೂ ಈಗ ಕೊರೋನ ಭಯ ಶುರುವಾಗಿದೆ. ವಲಸೆ ಹೋದವರಿಂದ ಊರಿಗೆ ಎಲ್ಲಿ ಕೊರೋನ ಒಕ್ಕರಿಸಿಕೊಳ್ಳುತ್ತೋ ಎಂಬ ಆತಂಕ ಹಳ್ಳಿಗಳಲ್ಲಿ ಕಾಡುತ್ತಿದೆ.
ಲಿಂಗಸೂಗೂರು ತಾಲ್ಲೂಕಿನಲ್ಲಿ ಕೊರೋನ ಸೊಂಕೀತರ ಸಂಖ್ಯೆ ದಿನೇ ದಿನೇ ಏರು ಗತಿಯಲ್ಲಿ ಸಾಗಿದ್ದು ಪ್ರತಿ ದಿನ ಕೋವಿಡ್ ಪ್ರಕರಣಗಳು ಎರಡಂಕಿ ಗಡಿ ದಾಟುತ್ತಿವೆ.
ಸಾಲದು ಎಂಬಂತೆ ತಾಲ್ಲೂಕಿನಲ್ಲಿ ಈಗ ಮತ್ತೊಂದು ತಲೆನೋವು ಶುರುವಾಗಿದೆ.
ಅಂತರ್ ಜಿಲ್ಲೆ ಅಂತರ್ ರಾಜ್ಯ ಗುಳೆ ಹೋದವರು ಈಗ ಸ್ವಗ್ರಾಮಕ್ಕೆ ಮರಳುತ್ತಿದ್ದು ಜಿಲ್ಲೆಯಲ್ಲಿ ಸೊಂಕಿನ ಭೀತಿ ಎದುರಾಗಿದೆ.
ಲಿಂಗಸೂಗೂರು ತಾಲ್ಲೂಕಿನವರು ಮಹಾರಾಷ್ಟ್ರ ಗೋವಾ ಬೆಂಗಳೂರಿಗೆ ಮಂಗಳೂರು ಸೇರಿದಂತೆ ಅಂತರ್ ಜಿಲ್ಲೆ ಅಂತರ್ ರಾಜ್ಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೋದವರಿದ್ದಾರೆ. ಕೊರೋನ ಎರಡನೇ ಅಲೆಯ ಭಯದಲ್ಲಿ ಮತ್ತೆ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.
ಹೊರಗಿನಿಂದ ಬರುವವರಿಗೆ ತಾಲ್ಲೂಕಿನಲ್ಲಿ ಸೂಕ್ತ ತಪಾಷಣೆ ನಡೆಯುತ್ತಿಲ್ಲ, ಬಸ್ ಖಾಸಗಿ ವಾಹನದಲ್ಲಿ ಸಾಮಾಜಿಕ ಅಂತರ ಮಾಸ್ಕ್ ಹಾಕದೆ ಗುಂಪು ಗುಂಪಾಗಿ ಪ್ರಯಾಣಿಸುತ್ತಿದ್ದು ತಾಲ್ಲೂಕು ಆಡಳಿತ ಎಷ್ಟೇ ಹೇಳಿದರೂ ಜನ ಮಾತ್ರ ಕೋವಿಡ್ ನಿಯಮ ಪಾಲಿಸುತ್ತಿಲ್ಲ.
ಹೀಗಾಗಿ ಹಳ್ಳಿಗಳಲ್ಲಿ ನೆಮ್ಮದಿಯಿಂದ ಇದ್ದವರಿಗೂ ಈಗ ಕೊರೋನ ಭಯ ಶುರುವಾಗಿದೆ. ವಲಸೆ ಹೋದವರಿಂದ ಊರಿಗೆ ಎಲ್ಲಿ ಕೊರೋನ ಒಕ್ಕರಿಸಿಕೊಳ್ಳುತ್ತೋ ಎಂಬ ಆತಂಕ ಹಳ್ಳಿಗಳಲ್ಲಿ ಕಾಡುತ್ತಿದೆ.