ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು : ತಾಲ್ಲೂಕಿನ ಮುದಗಲ್ ಪಟ್ಟಣದ ಪುರಸಭೆಯ ವಾಲ್ ಮ್ಯಾನ್ ಸಿಬ್ಬಂದಿಯಾದ ವೆಂಕಟೇಶ ತಳವಾರ ಅವರು ಲಂಚ ಸ್ವೀಕರಿಸುವಾಗ A C B ಬಲೆಗೆ
ಮುದಗಲ್ ಪಟ್ಟಣದ ಪುರಸಭೆ ಸಿಬ್ಬಂದಿಗೆ ಮಂಜೂರಾದ ಗೃಹ ವಸತಿ ಯೋಜನೆಯ ಮನೆ ನಿರ್ಮಾಣದ ಮಾಡಲು ಹಣ ಬಿಡುಗಡೆ ಮಾಡಲು ಪೌರ ಕಾರ್ಮಿಕರಾದ ಬಸಮ್ಮ ಎಂಬವರಿಗೆ ರೂ.25 ಸಾವಿರ ಲಂಚ ಕೇಳಿದ್ದರು. ಬಸಮ್ಮ ಅವರ ಮಗ ರಮೇಶ A C B ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರಗೆ ACB ಎಸ್.ಪಿ. ಗುರುನಾಥ ಮಟ್ಟೂರು ಅವರ ಮಾರ್ಗದರ್ಶನ ಮೇರೆಗೆ ಡಿ.ವೈ.ಎಸ್.ಪಿ ಶಿವಕುಮಾರ, ಪಿ.ಎಸ್.ಐ ಪ್ರದೀಪ ತಳ್ಳಿಕೇರಿ, ವೀರಣ್ಣ ಹಳ್ಳಿ, ಕಾನಸ್ಟೇಬಲ್ ವಿಕ್ರಮ ಸಿಂಹರೆಡ್ಡಿ, ರಾಜಪ್ಪ, ವಿನೋಧರಾಮ, ಮುರಳಿ, ಬಸವರಾಜೇಶ್ವರಿ, ನಾಗರಾಜ, ಬಸವರಾಜ ಅವರ ನೇತೃತ್ವದ ತಂಡ ದಾಳಿ ಮಾಡಿ ವೆಂಕಟೇಶ ಅವರನ್ನ ಬಂದಿಸಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದರು.