ಪಡಿತರ ರೇಷನಗಾಗಿ ಜನರ ಪರದಾಟ

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗೂರು: ತಾಲೂಕಿನ ಹಟ್ಟಿಚಿನ್ನದಗಣಿ ಪಟ್ಟಣದಲ್ಲಿ
೩ ತಿಂಗಳಿಂದ ರೇಷನ ವಿತರಿಸದಿರುವ ಹಿನ್ನಲೆಯಲ್ಲಿ ಮಹಿಳೆಯರು ಹಾಗೂ ಪುರುಷರು ರೇಷನಗಾಗಿ ನ್ಯಾಯ ಬೆಲೆ ಅಂಗಡಿ ಮುಂದೆ ಪರದಾಡುತ್ತಿರುವ ದೃಶ್ಯ ಕಂಡು ಬಂದಿತು,
ಹಟ್ಟಿಚಿನ್ನದಗಣಿ ಪಟ್ಟಣದ ಹಳೆಪಂಚಾಯತ್ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮುಂದಿನ ನ್ಯಾಯಬೆಲೆ ಅಂಗಡಿಯ ಮುಂದೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು,
ಸುಮಾರು ೨೫೦ ಗ್ರಾಹಕರಿಂದ, ಪರಸ್ಪರ ಅಂತರ ಕಾಯ್ದುಕೊಳ್ಳದೆ ಜಮಾಯಿಸಿದ್ದರು
ಥಂಬ್ ಪಡೆದು ಚೀಟಿ ನೀಡಿ ೩ ತಿಂಗಳಿಂದ ಧಾನ್ಯ ವಿತರಿಸದೆವಂಚನೆ ಮಾಡಿದ್ದಾರೆ ಎಂದು ಸಾರ್ವಜನಿಕರಾದ ಶಂಕರ್ ಹಾಗೂ ಬಸವರಾಜ ಆರೋಪ ಮಾಡಿದರು,
ಈ ಕೂಡಲೆ ಲಿಂಗಸುಗೂರು ತಾಲೂಕಿನ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಡಜನರಿಗೆ ಅನುಕೂಲ ಮಾಡಿಕೊಂಡಬೇಕು ಎನ್ನುವದು ಸಾರ್ವಜನಿಕರು ಒತ್ತಾಯಿಸಿದರು.

Share and Enjoy !

Shares