ವಿಜಯನಗರಬಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದ ಕಟ್ಟಡದ ದುರಸ್ಥಿ ಕಾಮಗಾರಿ ಶೀಘ್ರವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ಣ ಸವದಿ ಹೇಳಿದರು.
ರಾಯಚೂರು ನಿಂದ ಪಟ್ಟಣದ ಮಾರ್ಗವಾಗಿ ಹೋಗುವಾಗ ಪಟ್ಟಣದ ಹಿರಿಯ ಮುಖಂಡ ಗುರುಬಸಪ್ಪರವರು ಸಚಿವರಿಗೆ ಮಾರ್ಗ ಮಧ್ಯದಲ್ಲಿ ತಡೆದು ಆಸ್ಪತ್ರೆಗೆ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಇದರಿಂದ ರೋಗಿಗಳಗೆ ತೊಂದರೆ ಆಗುತ್ತಿದೆ. ಬೇಗ ಕಾಮಗಾರಿ ಮುಗಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಆಸ್ಪತ್ರೆಗೆ ನಿತ್ಯ ಎಷ್ಟು ಲಸಿಕೆ ಬರುತ್ತಿದೆ ಎಂದು ವೈದ್ಯ ಡಾ.ಅನಂತ ಕುಮಾರಗೆ ವಿಚಾರಿಸಿದರು. ನಿತ್ಯ 30 ರಿಂದ 50 ರಷ್ಟು ಲಸಿಕೆ ಬರುತ್ತದೆ ಎಂದು ಉತ್ತರಿಸಿದರು.ಕೋವಿಡ್ ವ್ಯಾಕ್ಸಿನ್ ಕೊರತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾವುದೆ ಉತ್ತರ ನೀಡದೆ ಮೌನವಹಿಸಿ ಮುಂದೆ ಸಾಗಿದರು.
ಇದೆ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಅನಂತ ಕುಮಾರ, ನಾಗರಾಜ ದಫೇದರ, ನಾಗರಾಜ ತಳವಾರ ಇದ್ದರು.