ಸರಕಾರ ನಿಗದಿ ಪಡಿಸಿದ ಅವಧಿಯಲ್ಲೇ ಅಂಗಡಿ ತಗಿಯುವಂತೆ ವರ್ತಕರಿಗೆ ನೋಟಿಸ್ ನೀಡಿದ ಎಂ. ಸೂಗೂರು ಟಾಸ್ಕ್ ಪೋರ್ಸ್ ಸಮಿತಿ ತಂಡ

Share and Enjoy !

Shares
Listen to this article

ಕುರುಗೋಡು. ಮೇ.4

ಕೋವಿಡ್ 2ನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಅದೇಶಿಸಿರುವ  ಕರ್ಪೂಯುಗೆ ಗ್ರಾಮೀಣ ಭಾಗದಲ್ಲಿ ನಿರಾಶೆ ಪ್ರತಿಕ್ರಿಯೆ ಕಂಡುಬರುತ್ತಿರುವ ಹಿನ್ನಲೆ ತಾಲೂಕಿನ ಎಂ. ಸೂಗೂರು ಗ್ರಾಪಂಯ ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ತಂಡ ದಿನಸಿ ಅಂಗಡಿ ಗಳಿಗೆ ಹಾಗೂ ಕಿರಾಣಿ ಸ್ಟೋರ್ ಅಂಗಡಿ ಗಳಿಗೆ,ತಂಪು ಪಾನೀಯಗಳಿಗೆ ಭೇಟಿ ನೀಡಿ ಸರಕಾರ ನಿಗದಿ ಪಡಿಸಿರುವ ಸಮಯ ಅವಧಿಯಲ್ಲೇ ಅಂಗಡಿಗಳನ್ನು ತೆರೆಯಬೇಕು. ಅಂಗಡಿ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಯ್ದಿಕೊಳ್ಳಲು 6 ಅಡಿ ಬಾಕ್ಸ್ ಗಳನ್ನು ಹಾಕಬೇಕು, ಅದರಂತೆ ಅಂಗಡಿ ಮಾಲೀಕರು ಮಾಸ್ಕ್ ಮತ್ತು ಬ್ಲೌಸ್, ಸ್ಯಾನಿ ಟೈಜಾರ್ ಕಡ್ಡಾಯವಾಗಿ ಬಳಕೆ ಮಾಡಬೇಕು. ಸರಕಾರ ನಿಗದಿ ಪಡಿಸಿದ ಸಮಯ ಮೀರಿ ಅಂಗಡಿಗಳು ತೆರೆದರೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೆ ಸಾರ್ವಜನಿಕ ದಿನಸಿ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದು ಕಂಡು ಬಂದ್ರೆ ವರ್ತಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪಿಡಿಒ ಯಮುನೂರಪ್ಪ ಕಬ್ಬಣ್ಣವರ ವರ್ತಕರಿಗೆ ನೋಡಿಸಿ ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು.

 

ಅಲ್ಲದೆ ಗ್ರಾಮದ ರಸ್ತೆ ಪಕ್ಕದಲ್ಲಿ ಕೂತಿದ್ದ ಜನರಿಗೆ ಹಾಗೂ ಯುವಕರಿಗೆ ಮನೆಯಿಂದ ಹೊರಗಡೆ ಬರದೇ ಮನೆಯಲ್ಲೇ ಸುರಕ್ಷಿತವಾಗಿದ್ದು ಕೊರೊನಾ ದಿಂದ ಮುಕ್ತಿ ಹೊಂದಿ ಎಂದು ತಿಳಿ ಹೇಳಿದರು.

ಕೋವಿಡ್ 19 ಎರಡನೇ ಅಲೆ ಇಲ್ಲಾಂದರಲ್ಲಿ ಹೆಚ್ಚಾಗಿ ಕಂಡು ಬರುತಿದ್ದು ಇದಕ್ಕೆ ವೃದ್ಧರು ಮತ್ತು ಯುವಕರು, ಚಿಕ್ಕ ಮಕ್ಕಳು ಅತಿ ಹೆಚ್ಚಿನ ಸಂಖ್ಯೆ ಯಲ್ಲಿ ಬಲಿಯಾಗುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಅನಗತ್ಯವಾಗಿ ಹೊರಗಡೆ ಬರದೇ ಮತ್ತು ಗುಂಪಾಗಿ ಸೇರದೆ ಮಾಸ್ಕ್ ಧರಿಸಿ, ಸ್ಯಾನಿ ಟೈಜಾರ್ ಬಳಸಿ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕೆ. ಅರ್. ಚಂದ್ರಶೇಖರ್, ಗ್ರಾಪಂ ಸದಸ್ಯ ಯರಿಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.

Share and Enjoy !

Shares