ಅನಗತ್ಯ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಖಾಕಿ ಪಡೆ.

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ಲಿಂಗಸೂಗೂರು ; ಲಾಕ್‍ಡೌನ್ ಮಾದರಿಯ ಕರ್ಫ್ಯೂನಲ್ಲಿ ಸರಕಾರ ಹೊರಡಿಸಿದ್ದ ಪರಿಷ್ಕೃತ ಆದೇಶದಲ್ಲಿ ಅಗತ್ಯವಸ್ತುಗಳ ವ್ಯವಹಾರದ ಸಮಯವನ್ನು ಮಧ್ಯಾಹ್ನ 10 ಗಂಟೆಯವರೆಗೆ ವಿಸ್ತರಿಸಿದ್ದನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡಿದ್ದು, ಅನಗತ್ಯವಾಗಿ ಸೋಮವಾರ ಲಿಂಗಸೂಗೂರು  ವಾಹನದಲ್ಲಿ ತಿರುಗಾಡುತ್ತಿದ್ದವರಿಗೆ  ಖಾಕಿ‌ಪಡೆ    ಬಿಸಿ  ಮುಟ್ಟಿಸಿದೆ.ಅನಗತ್ಯವಾಗಿ ಸಂಚಾರಿಸುತ್ತಿದ್ದ ವಾಹನಗಳನ್ನು ತಡೆ ಹಿಡಿದ ವಿಚಾರಣೆ ನಡೆಸಿ  ಪೊಲೀಸ್ ವಶಕ್ಕೆ ಪಡೆದು  ದಂಡ ವಿಧಿಸಲಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ಮಾತ್ರ 10 ಗಂಟೆಯ ತನಕ ಅವಕಾಶವಿತ್ತು. ಆದರೆ ಕೆಲವರು ಅನಗತ್ಯವಾಗಿ ತಿರುಗಾಟ ಮಾಡುತ್ತಿರುವುದು ಕಂಡು ಬಂತು. ವಾಹನ ದಟ್ಟಣಿ ಹೆಚ್ಚುತ್ತಿರುವುದನ್ನು ಮನಗಂಡ ಆರಕ್ಷರು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಶೀಲನೆಗೆ ಮುಂದಾದರು. ಈ ಸಂದರ್ಭ ಹಲವಾರು ಮಂದಿ ಸಂಚಾರದ ಉದ್ದೇಶವನ್ನು ತಿಳಿಸಲು ವಿಫಲರಾದ ಕಾರಣ ಆ ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆದು ಕೊರೋನಾ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ. 

 ಪೊಲೀಸರು ಸಾಮಾಜಿಕ ಅಂತರ ಮರೆತ ಜನರಿಗೆ ಎಚ್ಚರಿಕೆ ನೀಡಿದರು.

ಲಿಂಗಸೂಗೂರು  ಡಿವೈಎಸ್ಪಿ ಹುಲ್ಲೂರ ಹಾಗೂ  ಸಿಪಿಐ ಮಹಾಂತೇಶ ಸಜ್ಜನ್   ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದರು.

Share and Enjoy !

Shares