ವಿಜಯನಗರ ವಾಣಿ ಸುದ್ದಿ : ಬಳ್ಳಾರಿ
ಬಳ್ಳಾರಿ: ಇತ್ತೀಚಿಗೆ ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಮೇಲೆ, ರೋಗಿಯನ್ನು ಕಳೆದುಕೊಂಡ ಕುಟುಂಬದವರು ಹಲ್ಲೆ ನಡೆಸಿದ್ದು ಕಂಡನಿಯ ಎಂದು ವೈದ್ಯಕೀಯ ದಂತ ವಿದ್ಯಾರ್ಥಿಗಳ ಸಮಿತಿ ಮುಖ್ಯಸ್ಥ ರವಿ ಕಿರಣಜೇಪಿ ಕಂಡಿಸಿ ಮಾತನಾಡಿದ ಅವರು.
ಇಂತ ಘಟನೆ ಇದೆ ಮೊದಲಬಾರಿ ಏನು ಅಲ್ಲಾ ಪದೆ ಪದೆ ಮರುಕಳಿಸುತಗತ್ತಿದೆ. ಕೆಲವು ದಿನಗಳ ಹಿಂದೆ ಮಂಡ್ಯ ಹಾಗೂ ಗುಲ್ಬರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿಯೂ ವೈದ್ಯರ ಮೇಲೆ ಹಲ್ಲೆ ನಡಸಿದ್ದರು. ರೋಗಿಗಳನ್ನು ಚಿಕಿತ್ಸೆ ನೀಡಲು ವೈದ್ಯರು ಹರಸಾಹಸ ಪಡುತ್ತಾರೆ ಉದ್ದೆಶ ಪೂರ್ವಕವಾಗಿ ಯಾವ ರೋಗಿಯನ್ನು ವೈದ್ಯರು ನಿರ್ಲಕ್ಷ ಮಾಡಲ್ಲ ಆದರ ಮೃತರ ಸಂಬಂದಿಗಳು ಸ್ಪಷ್ಟವಾದ ಕಾರಣ ತೀಳಿಯದೆ ವಿನಕಾರಣ ಹಲ್ಲೆ ನಡೆಸುವದು ಕಂಡನಿಯ
ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ
ಇಡೀ ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕವನ್ನು ರೋಗವನ್ನು ತಡೆಗಟ್ಟಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲು ರಾತ್ರಿಯೆನ್ನದೇ
ದುಡಿಯುತ್ತಿರುವ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರ ಕೆಲಸವನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ.
ದೇಶದಾದ್ಯಂತ ಎರಡನೆ ಅಲೆಯು ತೀವ್ರ ಸ್ವರೂಪದಲ್ಲಿ ಬಂದೊದಗುತ್ತಿದೆ ಮಾಹಿತಿಯನ್ನು ತಜ್ಞರು ಕೇಂದ್ರ ಸರ್ಕಾರಕ್ಕೆ
ಈ ಮುಂಚೆಯೇ ತಿಳಿಸಿದ್ದರು ಸಹ, ಇದನ್ನು ಘಣನೆಗೆ ತೆಗೆದುಕೊಳ್ಳದರ ಪರಿಣಾಮ ಇಂದು ಆಸ್ಪತ್ರೆಗ¼ಲ್ಲಿ ವೈದ್ಯರುಗಳು
ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವ ಸಂಸ್ಥೆಯ ಸೂಚನೆಯ ಪ್ರಕಾರ 1:1000 ಪ್ರಾರದಲ್ಲಿ ವೈದ್ಯ ಹಾಗೂ
ರೋಗಿಯ ಅನುಪಾತವಿರಬೇಕು. ಆದರೆ, ನಮ್ಮ ದೇಶದಲ್ಲಿ ಈ ಸಂದರ್ಭದಲ್ಲಿ ಅದು 1:1456 ಅನುಪಾತದಲ್ಲಿದೆ. ಅಲ್ಲದೇ,
ನೂರಾರು ಸಂಖ್ಯೆಯಲ್ಲಿ ವೈದ್ಯರು ಸೋಂಕಿತರನ್ನು ಶೂಶ್ರೂಷೆ ಮಾಡುವಾಗ ಕೊರೋನಾ ರೋಗಕ್ಕೆ ಬಲಿಯಾಗಿದ್ದಾರೆ.
ಆದರೆ, ಅವರ ಸಾವಿರ ಸಂಖ್ಯೆಯು ಸಹ ¸ ರ್ಕಾರದ ಬಳಿ ಸಲ್ಲದು. ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ಆಕ್ಸಿಜನ್
ಸಿಲಿಂಡರ್‌ಗಳು ಸಿಗದೆ ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರದ
ಬೇಜವಾಬ್ದಾರಿತನವೇ ಕಾರಣ. ಈ ಸಂದರ್ಭದಲ್ಲಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನಾವು ಬೆಂಬಲವನ್ನು
ಸೂಚಿಸುತ್ತ, ಸರ್ಕಾರವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ.
ಎಂದು ವೈದ್ಯರಿಗೆ ಸರಿಯಾದ ವ್ಯವಸ್ಥೆ ಕಲ್ಪಸಬೇಕೆಂದು ವೈದ್ಯಕೀಯ ದಂತ ವಿದ್ಯಾರ್ಥಿಗಳ ಸಮಿತಿ ಮುಖ್ಯಸ್ಥ ರವಿಕಿರಣ ಜೆಪಿ ಪತ್ರಿಕೆ ಹೇಳಿಕೆ ನೀಡಿದರು..