ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ 599ನೇ ಜಯಂತಿ ಆಚರಣೆ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

 

(ವಿಜಯನಗರ)ಹೊಸಪೇಟೆ ಮೇ.10: ಹೊಸಪೇಟೆ ತಾಲೂಕು ಕಚೇರಿಯ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು.

 ತಹಸೀಲ್ದಾರರಾದ ಹೆಚ್.ವಿಶ್ವನಾಥ್ ಅವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

 ಜಯಂತಿಯಲ್ಲಿ ತಹಸೀಲ್ದಾರರಾದ ಹೆಚ್.ವಿಶ್ವನಾಥ್ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಪೂರ್ವ ನಿಗದಿಯಾದ ಮದುವೆಯನ್ನು ನಡೆಸಲು ಅನುಮತಿ ನೀಡಿದ್ದು, ಯಾವುದೇ ಕಾರಣಕ್ಕೂ ಕಲ್ಯಾಣ ಮಂಟಪ ಹಾಗೂ ಮುಂತಾದ ಬಯಲು ಪ್ರದೇಶಗಳಲ್ಲಿ ಅವಕಾಶವಿರುವುದಿಲ್ಲ ಮನೆಯ ಮುಂದೆ ಮಾತ್ರ ಅವಕಾಶವಿದ್ದು ಕೇವಲ 40ಜನ ಮಾತ್ರ ಮದುವೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

ತಾಲೂಕು ಕಚೇರಿಯಲ್ಲಿ ತುರ್ತು ಕೆಲಸಕ್ಕಾಗಿ ಕೆಲ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ10ರಿಂದ ಮೇ 24ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು ಯಾರೂ ಕೂಡ ಅನವಶ್ಯಕವಾಗಿ ತಿರುಗಾಡಬಾರದು, ಪೆÇಲೀಸ್ ಸಿಬ್ಬಂದಿಗಳು ಕೆಲ ಕಡೆಗಳಲ್ಲಿ ಬ್ಯಾರಿಕೇಟ್‍ಗಳನ್ನು ಹಾಕಿ ಕಟ್ಟು-ನಿಟ್ಟಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ದಯವಿಟ್ಟು ಸಾರ್ವಜನಿಕರು ಅನವಶ್ಯಕವಾಗಿ ಓಡಾಡಬೇಡಿ ಎಂದು ಹೇಳಿದರು.

  ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಗ್ರೇಡ್-2 ತಹಶೀಲ್ದಾರರಾದ ಮೇಘಾ ಹಾಗೂ ಶಿರಸ್ತೇದಾರರಾದ ಶ್ರೀಧರ್, ಮಂಜುನಾಥ್, ಖಜಾನೆ ಇಲಾಖೆಯ ಪ್ರ.ದ.ಸ.ರಾದ ರಾಘವೇಂದ್ರ ಮತ್ತು ಸಮಾಜದ ಮುಖಂಡರರಾದ ಎನ್.ಜಡಿಯಪ್ಪ ಹಾಗೂ ತಾಲ್ಲೂಕು ಕಚೇರಿಯ ಕೆಲ ಸಿಬ್ಬಂದಿಗಳು ಜಯಂತಿಯಲ್ಲಿ ಭಾಗವಹಿಸಿದ್ದರು.

Share and Enjoy !

Shares