ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ಕುಡಿಯುವ ನೀರು ಚರಂಡಿ ಸ್ವಚ್ಛತೆ ಸೇರಿದಂತೆ ವಾರ್ಡಗಳ ವಿವಿಧ ಸಮಸ್ಯೆ ಬಗ್ಗೆ ಪುರಸಭೆ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಮಾತಿಗೆ ಕೊಡುತ್ತಿಲ್ಲ ಪಟ್ಟಣದ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಕೂಡ ಇಂತಾ ಶಾಸಕರು ನಮ್ಮಗೆ ಬೇಕಾ ಬರುತ್ತಿವೆ ನೀವು ಕೆಲಸ ಮಾಡಿ ಇಲ್ಲವಾದರೆ ರಾಜೀನಾಮೆ ನೀಡಿ ಎಂದು ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಪುರಸಭೆ ಮುಖ್ಯಾಧಿಕಾರಿಗೆ ಮತ್ತು ಸಿಬ್ಬಂದಿಗಳಿಗೆ ಚಳಿಬಿಡಿಸಿದರು,
ರಾಯಚೂರು ಜಿಲ್ಲೆಯ ಲಿಂಗಸುಗೂರು ಪುರಸಭೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಶಾಸಕ ಹೂಲಗೇರಿ ತರಾಟೆಗೆ ತೆಗದುಕೊಂಡರು,
ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ನಮ್ಮ ವಾರ್ಡನ ಸಮಸ್ಯೆಗಳಿಗೆ ಬಗ್ಗೆ ಮುಖ್ಯಾಧಿಕಾರಿಗಳು ನಮ್ಮ ಮಾತಿಗೆ ಯಾವುದೆ ಬೆಲೆ ಕೊಡುವದಿಲ್ಲ ಎಂದು ಮುಖ್ಯಾಧಿಕಾರಿ ವಿರುದ್ದ ಆರೋಪ ಮಾಡಿದರು,
ಮುಖ್ಯಾಧಿಕಾರಿಗಳು ಅಧ್ಯಕ್ಷರ ಉಪಾಧ್ಯಕ್ಷರ ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಹೊಂದಾಣಿಕೆ ಮಾಡಿಕೊಂಡು ಪಟ್ಟಣ ಅಭಿವೃದ್ಧಿ ಮಾಡಬೇಕು ಕೊರೋನಾ ವೈರಸ್ ಹರಡದಂತೆ ಪಟ್ಟಣದಲ್ಲಿ ಸ್ಯಾನಿಟೈಸರ ಸಿಂಪಡಣೆ ಮಾಡಿ ಈ ಮಹಾಮಾರಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳಬೇಕು ಎಂದು ಹೇಳಿದರು,
ಇದೆ ಸಂದರ್ಭದಲ್ಲಿ ಅಧ್ಯಕ್ಷೆ ಗದ್ದೆಮ್ಮ ಯಮನೂರು ಬೋವಿ, ಉಪಾಧ್ಯಕ್ಷ ಎಂ, ಡಿ, ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಹಾಗೂ ಪುರಸಭೆ ಸದಸ್ಯರು ಸೇರಿದಂತೆ ಸಿಬ್ಬಂದಿಗಳು ಇದ್ದರು,