ಹಣ ದುರ್ಬಳಕೆ, ಕರ್ತವ್ಯ ಲೋಪ ಹಿನ್ನೆಲೆ : ಪ್ರಭಾರಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸಸ್ಪೆಂಡ್​

 

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

 

ಲಿಂಗಸೂಗೂರು ; ಈ ಎಲ್ಲ ಆರೋಪಗಳ ಪರಿಶೀಲನೆಗೆ ತೆರಳಿದ್ದ ಉಪ ಕಾರ್ಯದರ್ಶಿ ಅವರ ವರದಿ ಆಧರಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಆದೇಶ ಹೊರಡಿಸಿದ್ದಾರೆ..

ಲಿಂಗಸುಗೂರು : ಹಣ ದುರ್ಬಳಕೆ, ಕರ್ತವ್ಯ ಲೋಪ ಆಧಾರದ ಮೇಲೆ ನರಕಲದಿನ್ನಿ ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೊಹ್ಮದ್​ ಖಾಜಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಲಿಂಗಸುಗೂರು ತಾಲೂಕಿನ ಹಲ್ಕಾವಟಗಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ನರಕಲದಿನ್ನಿ ಪಂಚಾಯತ್‌ ಪ್ರಭಾರಿ ಪಿಡಿಒ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ. ಚು‌ನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಜನತೆ ಸಾಮೂಹಿಕ ಆರೋಪಗಳು ಸಾಕಷ್ಡು ಬಂದಿವೆ. ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ, ಕರ್ತವ್ಯಲೋಪ, ಹಣ ದುರ್ಬಳಕೆಯಂತ ಹಲವು ದೂರುಗಳ ಇಲಾಖಾ ವಿಚಾರಣೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ.ಈ ಎಲ್ಲ ಆರೋಪಗಳ ಪರಿಶೀಲನೆಗೆ ತೆರಳಿದ್ದ ಉಪ ಕಾರ್ಯದರ್ಶಿ ಅವರ ವರದಿ ಆಧರಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಆದೇಶ ಹೊರಡಿಸಿದ್ದಾರೆ.

Share and Enjoy !

Shares