ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು:ಅಬಕಾರಿ ಇಲಾಖೆ ಮುಖ್ಯ ಅಧಿಕಾರಿ ಸಿದ್ದಾರೂಡ ಲಕ್ಕಾ ಶೆಟ್ಟಿ ಮಿಂಚಿನ ಕಾರ್ಯಾಚರಣೆ.
ಅಕ್ರಮ ಮಧ್ಯ ವಸೆಕ್ಕೆ ಆರೋಪಿ ಪರಾರಿ.
ತಾಲ್ಲೂಕಿನ ದಡೆಸೂಗೂರು ಗ್ರಾಮದ ತುಂಗಭದ್ರ ಹೊಳೆಯ ಹತ್ತಿರ ತಾಲೂಕು ದಡೇಸೂಗುರು ತುಂಗಭದ್ರ ಹೊಳೆಯ ಹತ್ತಿರ ಅಕ್ವಾಗ್ರೀನ್ ಬಣ್ಣದ ಅಶೋಕ್ ಲೈಲ್ಯಾಂಡ್ ಕಂಪನಿಯ ನೊಂದಾಣಿ ಸಂಖ್ಯೆ: ಕೆಎ-37, ಎ-4931 ನಾಲ್ಕು ಚಕ್ರ ವಾಹನದಲ್ಲಿ ಅಕ್ರಮವಾಗಿ ಓರಿಜಿನಲ್ ಚಾಯ್ಸ್ ವಿಸ್ಕಿ 180 ಎಂ.ಎಲ್.ನ 08 ಮದ್ಯದ ಪೆಟ್ಟಿಗೆಗಳು ಮತ್ತು ಓರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್.ನ 76 ಮದ್ಯದ ಪೆಟ್ಟಿಗೆಗಳು ಒಟ್ಟು 725.760 ಲೀಟರ್ ಮದ್ಯವನ್ನು ಸಾಗಾಟ ಮಾಡುತ್ತಿರುವದನ್ನು ಪತ್ತೆಹಚ್ಚಿ ದಾಳಿಮಾಡಿದಾಗ ಆರೋಪಿತನು ತಲೆಮೆರೆಸಿಕೊಂಡಿದ್ದು ಯಾರೆಂಬುವುದು ಪತ್ತೆಯಾಗಿರುವುದಿಲ್ಲ. ಜೊತೆಗೆ
ಆಯನೂರು ಗ್ರಾಮದ ತುಂಗಭದ್ರ ನದಿ ತೀರದ ಹತ್ತಿರ ರಸ್ತೆ ಗಸ್ತು ಮಾಡುತ್ತಿರುವ ಸಮಯದಲ್ಲಿ ನದಿಯ ತೀರದಲ್ಲಿ ಅಕ್ರಮವಾಗಿ ಓ.ಸಿ ವಿಸ್ಕಿಯ 180 ಎಂ.ಎಲ್.ನ 12 ಮದ್ಯದ ಪೆಟ್ಟಿಗೆಗಳನ್ನು (103.680 ಲೀಟರ್ ಮದ್ಯ) ಶೇಖರಿಸಿಟ್ಟಿರುವುದು ಪತ್ತೇಯಾಗಿರುತ್ತದೆ. ಆರೋಪಿ ಯಾರೆಂಬುವುದು ಪತ್ತೆಯಾಗಿರುವುದಿಲ್ಲ. ಪಂಚನಾಮೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಶೀಘ್ರವಾಗಿ ಆರೋಪ ಗಳನ್ನು ಪತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತದೆ ಎಂದು ಪತ್ರಿಕೆಗೆ ತಿಳಿಸಿದರು.