ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನೆಯಿಂದಲೆ ಪ್ರತಿಭಟನೆ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ವಿನೂತನವಾಗಿ ಮನೆಯಿಂದಲೇ ಪ್ರತಿಭಟನೆ ನಡೆಸಿದರು..
ತಾಲ್ಲೂಕಿನ ತುರ್ವಿಹಾಳ್ ,ಜವಳಗೇರ ,ಸಾಲಗುಂದ ಗ್ರಾಮ ಹಾಗೂ ವಾರ್ಡ್ ನಂ 31 ಸುಂದರಯ್ಯ ನಗರ ಸೇರಿದಂತೆ ವೇಳೆ ವಿವಿಧೆಡೆ ಕಟ್ಟಡ ಕಾರ್ಮಿಕರು ಮನೆಯಿಂದಲೇ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಗತಿಪರ ಮುಖಂಡ ಶೇಕ್ಷಾಖಾದ್ರಿ ಮಾತನಾಡಿ ಲಾಕ್ ಡೌನ್ ನಿಂದ ಕಟ್ಟಡ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.ಅದಕ್ಕಾಗಿ ನೋಂದಾಯಿತ,ನೋಂದಾಯಿತರಲ್ಲದ ಎಲ್ಲಾ ಕಟ್ಟಡ ಕಾರ್ಮಿಕರಿಗೆ 10 ಸಾವಿರ ಮಾಸಿಕ ಪರಿಹಾರವನ್ನು 3 ತಿಂಗಳು ಕೊಡಬೇಕು. ಕೊರೋನ್ ದಿಂದ ಮರಣ ಹೊಂದಿದ ಕಟ್ಟಡ ಕಾರ್ಮಿಕರಿಗೆ 10 ಲಕ್ಷ ಪರಿಹಾರವನ್ನು ನೀಡಬೇಕು ಜೊತೆಗೆ ನೋಂದಾಯಿತರಲ್ಲದ ಕಟ್ಟಡ ಕಾರ್ಮಿಕರಿಗೆ 5 ಲಕ್ಷ ಪರಿಹಾರ ಒದಗಿಸಬೇಕು. ಕಳೆದ ಬಾರಿಯ 1 ಲಕ್ಷ ಕಾರ್ಮಿಕರ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿದರು. ನಂತರ ಕಾರ್ಮಿಕ ಮಂತ್ರಿ ಗಳಿಗೆ ಮನವಿಪತ್ರ ಕಳಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಮಾರುತಿ ಮೇಸ್ತ್ರಿ ,ರಾಜಸಾಬ ಜವಳಗೇರ. ಅನ್ವರ್ ಪಾಶ ಮೇಸ್ತ್ರಿ ,
ಹೊನ್ನುರಪ್ಪ ,ಶೇಕರ ಮೇಸ್ತ್ರಿ ,ನಾಗರಾಜ ಮೇಸ್ತ್ರಿ, ಬಸವ ಮೇಸ್ತ್ರಿ ತುರ್ವಿಹಾಳ್.
ಖಾದರ್ ಮೇಸ್ತ್ರಿ ,ರಾಜಾ ಪೆಂಟರ್ ,ರಫಿ ಮೇಸ್ತ್ರಿ ,ದಾವಲ ಸಾಬ ಮೇಸ್ತ್ರಿ ,ಶೇಕಪ್ಪ ಪೆಂಟರ್ ,ಚಾಂದಪಾಶ ,ಶೇಕರ್ ಇಲೆಕ್ಟ್ರಿಷಿಯನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು

Share and Enjoy !

Shares