ವಿಜಯನಗರ ವಾಣಿ ಸುದ್ದಿ : ಬಳ್ಳಾರಿ ಜಿಲ್ಲಾ
ಸಿರುಗುಪ್ಪ: ಇಂದಿಗೂ ಭಾರತವನ್ನು ಕಾಡುವ ಬಹುಮುಖ್ಯ ಸಮಸ್ಯೆ ಎಂದರೆ ಜಾತಿ ವ್ಯವಸ್ಥೆ, ಇದು ಭಾರತದ ಪ್ರಗತಿಗೆ ಮಾರಕವಾಗುತ್ತದೆ ಎಂಬುದನ್ನು ಬಹುಜನರ ಅಭಿಪ್ರಾಯವಾಗಿದೆ, ಈ ಅಂಶವನ್ನು ಸಹಾಸ್ರಾರು ವರ್ಷಗಳಿಗೂ ಮೊದಲೇ ಅರಿತಿದ್ದ ಬಸವಣ್ಣನವರು ಜಾತಿ ವ್ಯವಸ್ಥೆಯ ನಿರ್ಮೂಲನಕ್ಕೆ ಸಂಕಲ್ಪ ತೊಟ್ಟಿದ್ದರೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.
ನಗರದ ತಾಲೂಕು ಕಛೇರಿಯಲ್ಲಿ ಸರಳವಾಗಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಮಾಜ ಮತ್ತು ಧಾರ್ಮಿಕ ಕ್ರಾಂತಿಯ ಜೊತೆಗೆ ಕನ್ನಡ ನಾಡನ್ನು ಭಕ್ತಿಯ ಹೊಳೆಯಲ್ಲಿ ಮೀಯಿಸಿದ ಮಹಾಪುರಷರಾಗಿದ್ದ ಬಸವಣ್ಣನವರು ಭಕ್ತಿಯ ರಸವನ್ನು ಮನೆ ಮನೆಗೆ ಹಂಚಿ ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಮಾಡಿದರು. ಜ್ಞಾನ ಗಂಗೆಯ ಅಮೃತವನ್ನು ಅಂತಜರಿಗೆ ದಣಿವರಿಯೇ ಉಣಿಸಿದವರು, ಇವರು ಆಡಿದ ನುಡಿ ವಚನವಾಯಿತು, ಅದು ಎಂದೆಂದಿಗೂ ಸರ್ವಕಾಲಿಕವಾಗಿ ಸಲ್ಲುವ ಸತ್ಯವಾಯಿತು, ಬಸವಣ್ಣನವರನ್ನು ಜಗತ್ತು ಯುಗಪುರುಷನೆಂದು ಕರೆಯುತ್ತಿದೆ, ಜಾತಿವರ್ಣ, ವರ್ಗರಹಿತ ಸಮಾನತೆಯ ಸಮಾಜ ನಿರ್ಮಾಣ ಬಸವಣ್ಣನವರ ಮುಖ್ಯಗುರಿಯಾಗಿತ್ತು. ಈ ಮಹಾಕಾರ್ಯ ಶರಣ ಚಳುವಳಿ ಎಂಬ ಅರ್ಥದಲ್ಲಿ ಪ್ರಸಿದ್ಧಿಯಾಯಿತು ಎಂದು ಹೇಳಿದರು.
ತಹಶೀಲ್ದಾರ್ಎಸ್.ಬಿ.ಕೂಡಲಗಿ, ಸಿ.ಪಿ.ಐ. ಟಿ.ಆರ್.ಪವಾರ್, ಪೌರಾಯುಕ್ತ ಪ್ರೇಮ್‍ಚಾಲ್ರ್ಸ್, ಆಹಾರ ಶಿರಸ್ತೆದಾರ ಟಿ.ಮಹೇಶ, ಗ್ರಾಮಲೆಕ್ಕಾಧಿಕಾರಿ ರಾಮಪ್ಪ, ತಾಲೂಕು ಕಛೇರಿ ಸಿಬ್ಬಂದಿ ಶೇಖರ್ ಇದ್ದರು.ತಾಲೂಕು ಕಛೇರಿಯಲ್ಲಿ ಬಸವ ಜಯಂತಿ ಆಚರಣೆ:ರು.