ಹಸಿವು ನೀಗಿಸಿ ಮಾನವೀಯತೆ ಮೆರೆಯುತ್ತಿರುವ ಪುರಸಭೆ ಸದಸ್ಯ ದೊಡ್ಡನಗೌಡ ಹೊಸಮನಿ ಸಾರ್ವಜನಿಕರ ಮೆಚ್ಚುಗೆ.

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸೂಗೂರು  :- ಭಾರತದಾದ್ಯಂತ  ಕೊರೋನಾ ಎರಡನೇ ಅಲೆ ತೀರ್ವವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿ, ಈ ದೇಶದಲ್ಲಿ ಒಂದು ಹೊತ್ತಿನ ತುತ್ತಿಗಾಗಿ ದುಡಿದು ತಿನ್ನುವವರ ಬದುಕನ್ನೇ ಮೂರಾಬಟ್ಟೆ ಮಾಡಿರುವ ಸಂದರ್ಭದಲ್ಲಿ ಹಸಿದವರಿಗೆ, ನಿರ್ಗತಿಕರಿಗೆ, ಬಿಕ್ಷುಕರಿಗೆ ಹಾಗೂ ಬೇರೆ ಊರುಗಳಿಂದ  ಆಸ್ಪತ್ರೆಗೆ ಬಂದವರಿಗೆ ಹೊಟ್ಟೆ ತುಂಬಿಸುವ  ಕೆಲಸ ಮಾಡುತ್ತಿರುವರು ಕೈಯಲ್ಲಿ ಊಟದ ಪಾಕೆಟ್  ಹಿಡಿದು ಹಸಿದವರ ಹೊಟ್ಟೆ ತುಂಬಿಸುತ್ತಿರುವುದು ಒಂದೆಡೆಯಾದರೆ

ಲಿಂಗಸೂಗೂರು ಪಟ್ಟಣದಲ್ಲಿ ಭಿಕ್ಷುಕರು’ ನಿರ್ಗತಿಕರು ಹಾಗೂ ಪರವೂರಿನಿಂದ ಬಂದಂತ ವರಿಗರೆ ಲಿಂಗಸೂಗೂರು ಪುರಸಭೆ  ಸದಸ್ಯರಾದ ದೊಡ್ಡನಗೌಡ ಹೊಸಮನಿ ವತಿಯಿಂದ ಮಧ್ಯಾಹ್ನ ಮತ್ತು ರಾತ್ರಿ  ಊಟದ ವ್ಯವಸ್ಥೆಯನ್ನೂ ಮಾಡುವುದರ ಜೊತೆಗೆ   ಕೊರೋನಾ ಖಾಯಿಲೆಯನ್ನು ಲೆಕ್ಕಿಸದೆ  ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.

ಈ ಸಂದರ್ಭದಲ್ಲಿ ದೊಡ್ಡನಗೌಡ ಹೊಸಮನಿ ಪುರಸಭೆ ಸದಸ್ಯರು  ಮಾತನಾಡಿ ನಮ್ಮ ಸೇವೆ ಕೊರೋನಾ ಗಿಂತ ವೇಗವಾಗಿ ತೊಡಗಿಸಿಕೊಂಡಿದೆ. ಹಾಗೂ ನಮ್ಮ ಸೇವೆ ಲಿಂಗಸೂಗೂರು ಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ, ಈ  ಭಯಾನಕ ಕೊರೋನ ಕಾಯಿಲೆಯಿಂದ ಯಾರು ಸಹ ಕೊನೆ ಉಸಿರು  ಎಳೆಯಬಾರದು, ಎನ್ನುವುದು ನಮ್ಮ ಬಯಕೆ, ಸಾವು ಬದುಕು ದೇವರ ಇಚ್ಛೆ ಲಿಂಗಸೂಗೂರು ಪಟ್ಟಣದಲ್ಲಿ

ಒಟ್ಟಾರೆಯಾಗಿ ಕರೋನ ಎಂಬ ಮಹಾ ಮಾರಿ ಕಾಯಿಲೆ ಜನರನ್ನು ಭಯ ಬೀತರನ್ನಾಗಿರುವ ನಡುವೆ ಇಂತವರ ಈ ಕಾರ್ಯ ಶ್ಲಾಘನೀಯವಾಗಿದ್ದು, ಇನ್ನೂ ಮುಂದಿನ ದಿನಗಳಲ್ಲೂ ಕೂಡ ಇವರ ಕಾರ್ಯ ಹೀಗೆ ಮುಂದುವರಿಯಲಿ ಎಂಬುದು ನಮ್ಮ ವಾಹಿನಿಯ ಆಶಯ

Share and Enjoy !

Shares