ಮುದಗಲ್ : ದೇವಸ್ಥಾನದ ಕೀ ಮುರಿದು ಕಳ್ಳತನ.

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ  

 

ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಆಶಿಹಾಳ ತಾಂಡದಲ್ಲಿ ದೇವಸ್ಥಾನದ ಕಬ್ಬಿಣದ ಗೇಟಿನ ಕೀ ಮುರಿದು  ದೇವರ ಮೇಲಿನ ಬೆಳ್ಳಿಯ ಮೂರ್ತಿ ಹಾಗೂ ತೊಟ್ಟಿಲು ಮತ್ತು ಕಾಣಿಕೆ ಪೆಟ್ಟಿಗೆಯ ಹಣ ದೋಚಿ   ದುಷ್ಕರ್ಮಿಗಳು  ಪರಾರಿಯಾಗಿದ್ದಾರೆ, 

 

ದೇವಸ್ಥಾನ ಕಳ್ಳತನ ಸುದ್ದಿ  ತಿಳಿದ ತಕ್ಷಣ ಮುದಗಲ್ ಪಿಎಸೈ ಡಾಕೇಶ ಉಪ್ಪಾರ ಆದೇಶದ ಮೇರೆಗೆ ಪೊಲೀಸ್  ಸಿಬ್ಬಂದಿ  ರುದ್ರಗೌಡ ಹಾಗೂ ಚುಕ್ಕೆಪ್ಪ ರಾಠೋಡ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ,

Share and Enjoy !

Shares