ವಿಜಯನಗರ ವಾಣಿ ಸುದ್ದಿ: ಸಿಂಧನೂರು
ರಾಯಚೂರು ಜಿಲ್ಲೆ
ಸಿಂಧನೂರು: ಕೊರೋನ್ ವೈರಸ್ ಹರಿವೆ ಇಲ್ಲದೇ ಮೈ ಮರೆತು ವ್ಯಾಪಾರ ವಹಿವಾಟು ದಲ್ಲಿ ತೊಡಗಿ ಅಗತ್ಯ ವಸ್ತುಗಳ ಜೊತೆಗೆ ಕೊರೋನ್ ವೈರಸ್ ತಮ್ಮ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿರುವ ಸಾರ್ವಜನಿಕರು…
ಇಂದು ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 12-00 ಗಂಟೆ ವರೆಗೆ ಅಗತ್ಯ ವಸ್ತುಗಳಾದ ನೀರು, ಹಾಲು, ಹಣ್ಣು, ಕಿರಾಣಿ ಅಂಗಡಿ, ತರಕಾರಿ, ಮಾಂಸ ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಿ.ಜೊತೆಗೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಸ್ಥರಗೆ ಮನವಿ ಮಾಡಲಾಗಿದೆ.ಕೊರೋನ್ ಸೋಂಕಿಗೆ ತುತ್ತಾಗಿ ಆಗುತ್ತಿರುವ ಸಾವು ನೋವುಗಳ ಬಗ್ಗೆ ದಿನನಿತ್ಯ ಸರ್ಕಾರ,ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಡಿ ದರ್ಜೆ ಸಿಬ್ಬಂದಿ ವರ್ಗವು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೋವಿಡ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸಿದ್ದಾರೆ. ಆದರೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕ ಮಾತ್ರ ಇದು ಕೊರೋನ್ ವೈರಸ್ ಬಗ್ಗೆ ಜಾಗೃತಿ ವಹಿಸಿದೆ.
ಮೈ ಮರೆತು ನಗರದಾದ್ಯಂತ ಜನರು ವ್ಯಾಪಾರ ವಹಿವಾಟು ದಲ್ಲಿ ತೊಡಗಿ ಅಗತ್ಯ ವಸ್ತುಗಳ ಜೊತೆಗೆ ಕೊರೋನ್ ವೈರಸ್ ತಮ್ಮ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ.ಸಂಚಾರಿ ಜನದಟ್ಟಣೆ ನಿಯಂತ್ರಣ ಮಾಡಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ