ನಿರ್ಗತಿಕರ ಬೆನ್ನಿಗೆ ನಿಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು

 

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ  ಕೊರೋನಾ  ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ  ಆಹಾರ ಧಾನ್ಯಗಳ ಕಿಟ್ ಉಚಿತವಾಗಿ ವಿತರಣೆ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜದಲ್ಲಿ ಏನಾದರೂ ಹೊಸತೊಂದು ಕೊಡುಗೆ ನೀಡಬೇಕೆನ್ನುವ ಹಂಬಲ, ಕೊರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡದೆ ಆದರೆ  ಸಾಮಾನ್ಯ  ಜನರಿಗೆ ಎದುರಾಗುವ ಸಮಸ್ಯೆಗಳಿಗೆ  ಸ್ಪಂಧಿಸುವ ಮೂಲಕ ಬಡ, ಸಾಮಾನ್ಯ  ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ  ಉಳಿದುಕೊಂಡಿದ್ದಾರೆ. ಕೊರೋನಾ     ಅಪಾಯದಲ್ಲಿದ್ದ  ನಿರ್ಗತಿಕರಿಗೆ  ಆಹಾರ ಧಾನ್ಯ ದಾರಿ ದೀಪವಾಗಿರಲಿದೆ ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಜನರ ನೆರವಿಗೆ ಮುಂದಾಗುವ ಅವಶ್ಯಕತೆ ಇದ್ದು ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಸಹಕರಿಸೋಣ ಎಂದು ನಾಗರಹಾಳ ಗ್ರಾಮಸ್ಥರಾದ  ಶಿವನಗೌಡ ,ಸಾಬಣ್ಣ    ಹೇಳಿದರು 

ಈ ಸಂದರ್ಭದಲ್ಲಿ ಮೇಲ್ವಿಚಾರಕ ಹರೀಶ್  ನಾಗರಾಳ ವಲಯದ ಎಸ್ಪಿ ಲಕ್ಷ್ಮಿ. ಪ್ರಮೀಳಾ. ಶ್ರೀದೇವಿ. ಲಕ್ಷ್ಮಿ. ಒಕ್ಕೂಟದ ಅಧ್ಯಕ್ಷ ರೇಣುಕಾ. ಶಕುಂತಲಾ ಸೇರಿದಂತೆ ಮುಂತಾದವರು ಇದ್ದರು,

Share and Enjoy !

Shares