ಗುರುಗುಂಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿದ ಸಂಸದ ರಾಜಾ ಅಮರೇಶ್ವರ ನಾಯಕ.

ಗ್ರಾಮೀಣ ಭಾಗದ ಜನತೆಗೆ ಕೊವಿಡ್ 19 ಅರಿವು ಅಗತ್ಯ

 

ಹಟ್ಟಿ : ಸಮೀಪದ  ಗುರುಗುಂಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ರಾಯಚೂರು  ಸಂಸದ ರಾಜಾ ಅಮರೇಶ್ವರ ನಾಯಕ  ಕೋವಿಡ್ 19  ವೈರಸ್ ನಿಯಂತ್ರಣದ ಮುಂಜಾಗೃತಾ ಕ್ರಮ ಕೈಗೊಳ್ಳವುದು ಹಾಗೂ ವ್ಯಾಕ್ಸಿನೆಷನ್ ನೀಡುವ  ಕುರಿತು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಬಡ ಜನರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದು ಅಲ್ಲದೆ ಜನರಿಗೆ ಕೋವಿಡ್ 19 ಎರಡನೆಯ  ಅಲೆ ವ್ಯಾಪಕವಾಗಿ ಹರಿದಿದ್ದು ಗ್ರಾಮೀಣ ಪ್ರದೇಶದಲ್ಲೂ ಸದ್ದು ಮಾಡುತ್ತಿದೆ ಇದರ ನಿಯಂತ್ರಣ ಮಾಡುವಲ್ಲಿ ವೈದ್ಯರು ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು ಈಗಾಗಿ ಸರಿಯಾಗಿ ಕಾರ್ಯ ನಿರ್ವಹಿಸಿ ನಿಮ್ಮೊಂದಿಗೆ ಸರಕಾರ ಸದಾ ಸನ್ನಾದ್ದವಾ ಗಿರುತ್ತದೆ ಎಂದು    ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.

 

ಈ ಸಂದರ್ಭದಲ್ಲಿ ರಾಜ ಸೋಮನಾಥ್ ನಾಯಕ್ ಎಪಿಎಂಸಿ ಸದಸ್ಯರು ಹಾಗೂ ಗಜೇಂದ್ರ ನಾಯಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಕ್ರಮ್ ಪಾಟೀಲ್.ಡಾ ಕಾವ್ಯ ಇತರರು ಉಪಸ್ಥಿತರಿದ್ದರು.

Share and Enjoy !

Shares