ಬಳ್ಳಾರಿ :ರೆಡ್‍ಕ್ರಾಸ್ ವತಿಯಿಂದ ವಿಮ್ಸ್‍ಗೆ ವೆಂಟಿಲೇಟರ್,ಕಾನ್ಸಂಟ್ರೇಟರ್‍ಗಳ ದೇಣಿಗೆ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ :ಬಳ್ಳಾರಿ

ಬಳ್ಳಾರಿ,ಮೇ21: ಕೋವಿಡ್ ಸೊಂಕಿತರ ಚಿಕಿತ್ಸೆಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ರೆಡ್‍ಕ್ರಾಸ್ ಸಂಸ್ಥೆಯ ಬಳ್ಳಾರಿ ಘಟಕದ ವತಿಯಿಂದ ವಿಮ್ಸ್ ಆಸ್ಪತ್ರೆಗೆ ಒಂದು ವೆಂಟಿಲೇಟರ್ ಹಾಗೂ ಎರಡು ಕಾನ್ಸಂಟ್ರೇಟರ್‍ಗಳನ್ನು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಸಮ್ಮುಖದಲ್ಲಿ ಶುಕ್ರವಾರ ದೇಣಿಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ವಿಮ್ಸ್ ನಿರ್ದೇಶಕರು ಹಾಗೂ ರೆಡ್‍ಕ್ರಾಸ್ ಬಳ್ಳಾರಿ ಘಟಕದ ಸಭಾಪತಿ ಡಾ.ಗಂಗಾಧರಗೌಡ, ಉಪಸಭಾಪತಿ ಡಾ.ಮಹಿಪಾಲ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಶಕೀಬ್ ಸೇರಿದಂತೆ ರೆಡ್‍ಕ್ರಾಸ್ ಸ್ವಯಂಸೇವಕರು ಇದ್ದರು.

Share and Enjoy !

Shares