ಲಿಂಗಸ್ಗೂರು ತಾಲೂಕಿನ ವೀರಾಪೂರು ನಲ್ಲಿ ಸಿಐಟಿಯು ಪ್ರತಿಭಟನೆ

Share and Enjoy !

Shares
Listen to this article

 

ಲಿಂಗಸುಗೂರು : ಕೋವಿಡ್ ಲಸಿಕೆಯನ್ನ ಉಚಿತವಾಗಿ ಹಾಗೂ ಸಾರ್ವತ್ರಿಕವಾಗಿ ನೀಡಬೇಕು, ಕೋವಿಡ್ ಸೋಂಕಿತರಿಗೆ ಸಮಾರೋಪಾದಿಯಲ್ಲಿ ಔಷಧಿ ಅಮ್ಲಜನಕ ಸೇರಿದ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ಹಾಗೂ ಡಿವೈಎಫ್ಐ ಪ್ರತಿಭಟನೆ ನಡೆಸಲಾಯಿತು.

ವೀರಾಪೂರು ಗ್ರಾಮದ ಶ್ರಮಿಕ ಭವನದಲ್ಲಿ ಪ್ರತಿಭಟನೆ ನಡೆಸಿ ಎಲ್ಲಾ ಅಸಂಘಟಿತ ಕಾರ್ಯಮಿಕರು ಹಾಗೂ ಆಧಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಮೂರು ತಿಂಗಳು  ಹತ್ತು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಬೇಕು, ತಲಾ ಹತ್ತು ಕೆ.ಜಿ.ಯಂತೆ 6 ತಿಂಗಳು ಆಹಾರ ಧಾನ್ಯ ನೀಡಬೇಕು, ರೈತ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು ಕೃಷಿ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ, ವೈಜ್ಞಾನಿಕವಾದ ಬೆಂಬಲ ಬೆಲೆ ಮತ್ತು ಬೆಳೆ ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ಕೆಲಸದ ದಿನಗಳಿಗೆ ಕೂಲಿ  700 ರೂಪಾಯಿಗೆ  ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತರು, ಪೌರಕಾರ್ಮಿಕರು ಸೇರಿದಂತೆ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ಸುರಕ್ಷಾ ವಿಮೆ ನೀಡಬೇಕೆಂದು  CITU ಮತ್ತು DYFI ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

 

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಬಿಸಿಯೂಟ ನೌಕರರಾದ ಗೌರಮ್ಮ ಹಿರೇಮಠ, ಬಸಮ್ಮ, ಯಲ್ಲಮ್ಮ, ಡಿವೈಎಫ್ಐ ಮುಖಂಡರಾದ ಶಿವರಾಜ್ ಕಪಗಲ್, ನಿಂಗಪ್ಪ ಎಂ., ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ನಾಗಮ್ಮ ಕಾಟಿಗಲ್, ಶಾಂತಮ್ಮ ಈಚನಾಳ, ಪಂಚಾಯ್ತಿ ನೌಕರರಾದ ಮಂಜುನಾಥ ಗೆಜ್ಜಲಗಟ್ಟಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share and Enjoy !

Shares