ಕೂಡ್ಲಿಗಿ :ಮೌಲಾರವರ ನೇತೃತ್ವದಲ್ಲಿ ತರಕಾರಿ ಕಿಟ್ ವಿತರ

Share and Enjoy !

Shares
Listen to this article

 

ವಿಜಯನಗರ ಜಿಲ್ಲೆ

ಕೂಡ್ಲಿಗಿ:  ಮಹಾಮಾರಿ ಕೊರೊನಾದ ಹಾವಳಿ ಹೆಚ್ಚಾಗಿರುವುದರಿಂದ,ಪಟ್ಟಣ  ಕಂಪ್ಲೀಟ್ ಬಂದ್ ಆಗಿರುವುದರಿಂದ ಊರಿನ ಜನತೆಗೆ ಕೋರೋನಾದ ಬಗ್ಗೆ ಜಾಗ್ರತೆ ವಹಿಸಿ, ಮನೆಯಲ್ಲಿಯೇ ಇರುವಂತೆ ಎಲ್ಲರನ್ನೂ ಜಾಗೃತಗೊಳಿಸಲಾಯಿತು.

ಮುತವಲ್ಲಿ ಬಾಷ ಸಾಬ್ ಮತ್ತು  ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಮಾತನಾಡಿ, ಈ ಮಹಾಮಾರಿ ಕೋರೋನ ದ ಬಗ್ಗೆ ಹೆಚ್ಚಿಗೆ ಜಾಗ್ರತೆಯಿಂದ ಇರಲು ಮತ್ತು ಸ್ವಚ್ಚತೆ ಕಾಪಾಡಲು ಮನವಿ ಮಾಡಿದರು.

ಮೌಲಾನ ಮಕ್ಬೂಲ್ ಸಾಬ್ ಮಾತನಾಡಿ ಇಸ್ಲಾಂ ಎಂದರೆ 1 ಅಲ್ಲಾಹನ ಪ್ರಾರ್ಥನೆ, ಎರಡನೆಯದು ಬಡವರ ಬಗ್ಗೆ ಕಾಳಜಿ ವಹಿಸುವುದು ಎಂದು ಅವರು ಉಪದೇಶಿಸಿದರು. ಈ (ಹದೀಸ್) ವಾಕ್ಯಗಳ ಪ್ರೇರಣೆಯಿಂದ ಮೇ21ರಂದು ಶುಕ್ರವಾರ ಮಸ್ಜೀದ್ ರಹೆಮಾನಿಯ ಆಜಾದ್ ನಗರಉಸ್ಮಾನಿಯ ವೆಲ್ಫೇರ್ ಅಸೋಸಿಯೇಶನ್ ಮತ್ತು ಸಲಾತ್ ಕಮಿಟಿ ಅಜಾದ್ ನಗರ ಕೂಡ್ಲಿಗಿ ವತಿಯಿಂದ ಕೂಡ್ಲಿಗಿ ಪಟ್ಟಣದ ಜನತೆಗೆ ಉಚಿತವಾಗಿ 150 ಕ್ಕೂ ಹೆಚ್ಚು ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. 

ಈ ಕಿಟ್ ನಲ್ಲಿ ಟೊಮೆಟೊ, ಮೆಣಸಿನ ಕಾಯಿ,ಜವಳೆಕಾಯಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಬೀಟ್‌ರೂಟ್ಸ್  ಇತರೆ ಒಟ್ಟು 8KG ತೂಕದ ತರಕಾರಿ ಕಿಟ್ ನ್ನು ಹಂಚಲಾಯಿತು.

ಈ ಸಮಯದಲ್ಲಿ ಮಸೀದಿಯ ಮುತುವಲ್ಲಿ ರಾದ ಎ.ಎಂ. ಬಾಷಾಸಾಬ್, ಕಾರ್ಯದರ್ಶಿಯಾದ ಅಬ್ದುಲ್  ಮನ್ನಾನ್, ಮೌಲಾನ ಮಕ್ಬೂಲ್ ಸಾಬ್, ಎ.ಎಮ್.ಭಾಷಾಸಾಬ್ ಹಾಗೂ ಕಮಿಟಿಯ ಸದಸ್ಯರು ಉಪಸ್ಥಿತಿರಿದ್ದರು

Share and Enjoy !

Shares