ಕೊವಿಡ್ ನಿಂದ ಮೃತಪಟ್ಟ ಶಿಕ್ಷಕರಿಗೆ ಪರಿಹಾರ ನೀಡಬೇಕು :ಎ ಐ ಡಿ ಎಸ್ ಓ ಒತ್ತಾಯ

Share and Enjoy !

Shares
Listen to this article

 

ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಮಹಾಮಾರಿಗೆ ತುತ್ತಾಗಿ ಮೃತಪಟ್ಟಿರುವ ಶಿಕ್ಷಕರ ಕುಟುಂಬದವರಿಗೆ ಪರಿಹಾರ  ನೀಡಬೇಕೆಂದು 

 ಎಐಡಿಎಸ್‌ಓ  ವಿದ್ಯಾರ್ಥಿ ಸಂಘಟನೆಯು ಒತ್ತಾಯ ಕೊರೋನಾ ಮಹಾಮಾರಿಯ ಎರಡನೆಯ ಅಲೆಯು ಇಡೀ ದೇಶದಲ್ಲಿ ಹಬ್ಬಿದ್ದು ಜನರು ಅತ್ಯಂತ ಕಷ್ಟದ 

ದಿನಗಳಲ್ಲಿ ಸಿಲುಕುವಂತಾಗಿದೆ. ಎರಡನೆಯ ಅಲೆಯ ಮುನ್ಸೂಚನೆ ಇದ್ದಾಗಿಯೂ ನಮ್ಮ ಸರ್ಕರಗಳು ನಡೆಸಿದ ಚುನಾವಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಪರಿಣಾಮವಾಗಿ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 

ಶೈಕ್ಷಣಿಕ ಚಟುವಟಿಕೆಗಳು ಕೂಡ ಅತಂತ್ರಗೊಂಡಿರುವ ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನಡೆಸಿದ ಚುನಾವಣಾ ಕಾರ್ಯಕ್ಕೆ ಸರ್ಕಾರವು ನೇಮಿಸಿದ್ದ ಹಲವು ಶಿಕ್ಷಕರು ರೋಗಕ್ಕೆ ಬಲಿಯಾಗಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ 

ಅಪಾರ ನಷ್ಟವನ್ನುಂಟು ಮಾಡಿದೆ!!

ಕೊರೋನಾದ ಮೊದಲನೆಯ ಅಲೆಯಿಂದಲೂ ಹಲವಾರು ಕೋವಿಡ್ ಸಂಬಂಧಿತ ಕೆಲಸಗಳಲ್ಲಿ 

ನಿಯೋಜನೆಗೊಂಡಿದ್ದ ಅನೇಕ ಶಿಕ್ಷಕರು ಯಾವ ಕನಿಷ್ಠ ಸುರಕ್ಷತೆಯೂ ಸಿಗದೆ ಮಹಾಮಾರಿಗೆ ಬಲಿಯಾಗಿರುವುದು 

ಬಹಳ ದುಃಖದ ಸಂಗತಿ. ಈ.ಹಿನ್ನೆಲಯಲ್ಲಿ ಶಿಕ್ಷಕರಿಗೆ ಆರೋಗ್ಯ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸಬೇಕು ಹಾಗೂ ಚುನಾವಣಾ ಕರ್ತವ್ಯದ ಸಮಯದಲ್ಲಿ ಮೃತಪಟ್ಟಿರುವ ಶಿಕ್ಷಕರ ಕುಟುಂಬಕ್ಕೆ ಕೂಡಲೇ ಪರಿಹಾರವನ್ನು ಒದಗಿಸಬೇಕು, 

ಅವರ ಮಕ್ಕಳ ಶಿಕ್ಷಣ ಮತ್ತು ಜೀವನೋಪಾಯದ ಜವಾಬ್ದಾರಿ ಸರ್ಕಾರ ವಹಿಸಬೇಕು ಹಾಗೂ ಯಾವುದೇ ರೀತಿಯ ಸಂಕಷ್ಟ ವಿದ್ಯಾರ್ಥಿಗಳ ವಿಧ್ಯಾಭ್ಯಾಸದ ಮೇಲೆ ಬೀರದಂತೆ ಇನ್ನಾದರೂ  ಸರ್ಕಾರವು ಎಚ್ಚೆತ್ತು‌ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಜಿಲ್ಲಾದ್ಯಕ್ಷ  ಗುರಳ್ಳಿ ರಾಜ . .

Share and Enjoy !

Shares