ಗ್ರಾಮ ಪಂಚಾಯತಿ ಅಧ್ಯಕ್ಷರಿಂದಲೇ ಸಾನಿಟೈಜರ್ ಸಿಂಪಡಣೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ಲಿಂಗಸೂಗೂರು  ; ಚುನಾವಣೆ ಬಂದರೆ ಸಾಕು ಮತದಾರರ ಮನವೊಲಿಸಲು  ಅಬ್ಯರ್ಥಿಗಳು ಗೆಲ್ಲುವಗೊಸ್ಕರ ಅಬ್ಯರ್ಥಿಗಳು ಎನೆಲ್ಲಾ ಹರಸಾಹಸ ಮಾಡುತ್ತಾರೆ.ಆದರೆ ಗೆದ್ದ ಬಂದ ನಂತರ ಮತದಾರರ ಕಡೆ ಗಮನ ಕೊಡದೆ ಇರುವ ಈಗಿನ‌ ಕಾಲದಲ್ಲಿ

ಮತದಾರರಿಂದ ಗೆದ್ದು ಬಂದ ಲಿಂಗಸೂಗೂರು  ತಾಲೂಕಿನ  ಕಾಳಾಪುರ  ಗ್ರಾಮ ಪಂಚಾಯತಿ  ವಾರ್ಡ ನಂಬರ 1 ಸದಸ್ಯರು  ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಿಜಯಕುಮಾರ್  ಹೊಸಗೌಡ್ರ ಹಾಗೂ   ಗ್ರಾಮಸ್ಥರು  ಸೇರಿಕೊಂಡು ಹಳ್ಳಿಗಳಲ್ಲಿ ವ್ಯಾಪಕವಾಗಿ ಹರಡಯತ್ತಿರುವ ಕೊರೊನಾ ತೊಲಗಿಸಲು  ಜಾಗೃತಿ ಮೂಡಿಸುತ್ತ,

ತಾವೆ ಖುದ್ದಾಗಿ ಕಳಾಪೂರ ಗ್ರಾಮದ  ಗ್ರಾಮ ಪಂ  ಅಧ್ಯಕ್ಷರಾದ ವಿಜಯಕುಮಾರ  ಹೊಸಗೌಡ್ರ ಕಳಾಪೂರ ಗ್ರಾಮದ ತುಂಬೆಲ್ಲಾ ಸಾನಿಟೈಜರ ಸಿಂಪಡಿಸಿ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ   ವಿಜಯಕುಮಾರ್ ಹೊಸಗೌಡ್ರ ಜನಸೇವೆ ಮಾಡುವದಕ್ಕಾಗಿಯೆ  ಇವತ್ತು ನಾವು ಸದಸ್ಯರಾಗಿದ್ದೇವೆ,ಇಂತಹ ಸಂಕಷ್ಟ ಸಮಯದಲ್ಲಿ ನಮ್ಮ ಜನರ ಆರೋಗ್ಯ ಮುಖ್ಯ ಆ ಕಾರಣಕ್ಕಾಗಿ ಇವತ್ತು ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ  ಜಾಗೃತಿ,ಅರಿವು, ಸಾನಿಟೈಜರ ಸಿಂಪಡಿಸಿ ನಮ್ಮ ಅಳಿಲು ಸೇವೆ ಮಾಡುತಿದ್ದೇವೆ ಎಂದರು.

Share and Enjoy !

Shares