234 ಗ್ರಾಪಂಗಳಲ್ಲಿ ಕೊರೊನಾ ಸೊಂಕಿತರು:ಜಿಪಂ ಸಿಇಒ ಕೆ.ಆರ್.ನಂದಿನಿ
ಬಳ್ಳಾರಿ,ಮೇ 22 : ಬಳ್ಳಾರಿ ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ 234 ಗ್ರಾಪಂಗಳಲ್ಲಿನ ಜನರಿಗೆ ಕೊರೊನಾ ಸೊಂಕು ತಗುಲಿರುವ ಮಾಹಿತಿಯನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟರು.
ಹಡಗಲಿ ತಾಲೂಕಿನ ಹ್ಯಾರಾಡ ಗ್ರಾಪಂ ಸೇರಿದಂತೆ 3 ಗ್ರಾಪಂಗಳಲ್ಲಿ ಮಾತ್ರ ಕೊರೊನಾ ಸೊಂಕಿತರಿಲ್ಲ.ಉಳಿದ ಎಲ್ಲ ಗ್ರಾಪಂಗಳಲ್ಲಿ ಕೊರೊನಾ ಸೊಂಕಿತರಿದ್ದು,ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಲ್ಲಿ ಗ್ರಾಪಂ ಟಾಸ್ಕ್‍ಫೋರ್ಸ್‍ಗಳನ್ನು ಕ್ರಿಯಾಶೀಲಗೊಳಿಸಲಾಗಿದೆ.ಇದರ ಜೊತೆಗೆ ಬಳ್ಳಾರಿ ಜಿಲ್ಲಾಡಳಿತವು ವಿಶೇಷವಾಗಿ ಕುಟುಂಬ ಸಂರಕ್ಷಣಾ ಟಾಸ್ಕ್‍ಫೋರ್ಸ್ ಅಂತ ರಚಿಸಿದ್ದು, ಪ್ರತಿ 50 ತಂಡಗಳಿಗೆ ಒಂದಂರೆ ತಂಡಗಳನ್ನು ರಚಿಸಲಾಗಿದ್ದು, ಈ ತಂಡದ ಸದಸ್ಯರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯ ಸಂದರ್ಭದಲ್ಲಿ ಜ್ವರ,ಶೀತ,ಕೆಮ್ಮುವಿನಂತ ಲಕ್ಷಣಗಳಿದ್ದಲ್ಲಿ ಜನರಲ್ ಮೆಡಿಕಲ್ ಕಿಟ್ ನೀಡಲಿದ್ದು;ಮೂರು ದಿನಗಳಲ್ಲಿ ಕಡಿಮೆಯಾಗದಿದ್ದಲ್ಲಿ ಆರೋಗ್ಯ ಸಿಬ್ಬಂದಿ ರ್ಯಾಪಿಡ್ ಆಂಟಿಜೇನ್ ಕಿಟ್ ಮುಖಾಂತರ ತಪಾಸಣೆ ನಡೆಸಿ ಪಾಸಿಟಿವ್ ಬಂದಲ್ಲಿ ಕೋವಿಡ್ ಕಿಟ್ ನೀಡಲಿದ್ದಾರೆ ಎಂದರು.
ಏಪ್ರಿಲ್ ಅಂತ್ಯದ ವೇಳೆಗೆ ನರೇಗಾದಲ್ಲಿ ನಿಗದಿಪಡಿಸಿದಕ್ಕಿಂತ ಶೇ.150ರಷ್ಟು ಗುರಿ ಸಾಧಿಸಲಾಗಿದೆ ಎಂದು ಅವರು ವಿವರಿಸಿದರು.