ಲಿಂಗಸುಗೂರು :ವಿ .ವಿ. ಸಂಸ್ಥೆಯಲ್ಲಿ ಶರಣಬಸಪ್ಪ ಗುಡದನಾಳ ಶ್ರದ್ದಾಂಜಲಿ

Share and Enjoy !

Shares

ವಿಜಯನಗರವಾಣಿ ಸುದ್ದಿ : ಲಿಂಗಸುಗೂರು

ರಾಯಚೂರು ಜಿಲ್ಲೆ

 

ಲಿಂಗಸೂಗೂರು   ; ದಿನಾಂಕ 22-05-2021 ರಂದು ಬೆಳಿಗ್ಗೆ 10-30 ಕ್ಕೆ ವೀ, ವೀ, ಸಂಘದ  ಸಂಸ್ಥೆ ಕಾರ್ಯಾಲಯದಲ್ಲಿ, ಸಂಘದ ಸಹ ಕಾರ್ಯದರ್ಶಿಗಳಾಗಿದ್ದ ಶರಣಬಸಪ್ಪ ಗುಡದನಾಳ್ ಇವರು ನಿಧಾನರಾದ ಪ್ರಯುಕ್ತ, ಸಂಘದ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಇವರ ಅಧ್ಯಕ್ಷತೆಯಲ್ಲಿ ಸಂತಾಪ ಸೂಚಕಸಭೆ ನೆಡೆಸಲಾಯಿತು. ಈ ಸಂರ್ಭದಲ್ಲಿ ಸಂಘದ ಆಡಳಿತಾಧಿಕಾರಿಗಳಾದ ಬಸವತಾರಾಯ ಕುರಿ. ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶರಣಪ್ಪ ಮೇಟಿ, ಹಾಗೂ ಸಂಘ ಸಂಚಲಿತ ಶಾಲಾ ಕಾಲೇಜುಗಳ  ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗುದವರು ಹಾಜರಿದ್ದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ  ಬಸವತಾರಾಯ ಕುರಿ ಮಾತನಾಡಿ ವೀ, ವೀ, ಸಂಘದ ಸಹ ಕಾರ್ಯದರ್ಶಿ ಗಳಾಗಿ ಶರಣಬಸಪ್ಪ ಗುಡದನಾಳ್  ವೀ. ವೀ ಸಂಘಕ್ಕೆ ಅವರು ನೀಡಿದ ಕೊಡುಗೆಯನ್ನ ಸಂಘವು ಸದಾಸ್ಮರಿಸುತ್ತದೆ ಎಂದು ತಿಳಿಸಿದರು, ಹಾಗೂ  ಶರಣಬಸಪ್ಪ ಗುಡದನಾಳ್ ಮಂಡಲ ಪಂಚಾಯ್ತ್ ಸದಸ್ಯರಾಗಿ ಅವರು ರಾಜಕೀಯ ಜೀವನವನ್ನ ಆರಂಭಿಸಿ,,1978-83 ರ ಅವಧಿಯಲ್ಲಿ ತಾಲೂಕ ಅಭಿವೃದ್ಧಿ ಸದಸ್ಯರಾಗಿ. ಹಟ್ಟಿ ಚಿನ್ನದ ಗಣಿ ಯ  ಆಡಳಿತ ಮಂಡಳಿ ನಿರ್ದೇಶಕರಾಗಿ 2 ಭಾರಿ ಸೇವೆ ಸಲ್ಲಿಸಿ, ಹಾಗೂ ಹಟ್ಟಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರೂ. ಹಾಗೂ ಹಟ್ಟಿ ಯ ಶರಣಬಸವೇಶ್ವರ ಜನ ಕಲ್ಯಾಣ ಸಂಘದ ಕಾರ್ಯದರ್ಶಿ ಯಾಗಿ, ಶ್ರೀ ಅಮರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿ ಅವರು ಮಾಡಿದ  ಸಾಮಾಜಿಕ ಕಾರ್ಯಗಳನ್ನು ಸಮಾಜ ಎಂದು ಮರೆಯುವುದಿಲ್ಲ, ಹಾಗೂ ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾಗಿ ಅವರು ಆಯ್ಕೆಯಾಗಿದ್ದನ್ನು ಸ್ಮರಿಸಬಹುದು , ಇದೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷರದ  ಅಮರೇಗೌಡ ಪಾಟೀಲ್ ಬಯ್ಯಾಪೂರ  ಇವರು ಮಾತನಾಡಿ ಶ್ರೀಯುತರು 40 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಮಾಡಿದ ಸಾಮಾಜಿಕ, ಧಾರ್ಮಿಕ, ಹಾಗೂ ಶೈಕ್ಷಣಿಕ ಕಾರ್ಯಗಳ ಬಗ್ಗೆ ಸ್ಮರಿಸುತ್ತಾ, ಶ್ರೀಯುತರ ಅಗಲಿಕೆಯಿಂದ ನಮ್ಮ ಸಮಾಜ ನೋವಿನಲಿ ಇದ್ದು, ಅವರ ಅಗಲಿಕೆಯ ನೋವನ್ನು ಮರೆಯುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ, ಹಾಗೂ ಸಮಾಜಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕರು ಅಮರೇಗೌಡ ಬಯ್ಯಾಪುರ   ಶರಣಪ್ಪ ಮೇಟಿ  ಬಸವಂತರಾಯ ಕುರಿ  ವಿ .ವಿ ಸಂಘದ   ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share and Enjoy !

Shares