ದ್ವಿಶತಕ ಬಾರಿಸಿದ ಕೊರೋನ್ ವೈರಸ್.ಇದು ಅಧಿಕಾರಿಗಳ ವೈಫಲ್ಯ? ಜನಸಾಮಾನ್ಯರ ನಿರ್ಲಕ್ಷ್ಯ ಕಾರಣವೆ?

ವಿಜಯನಗರ ವಾಣಿ ಸುದ್ದಿ:

ರಾಯಚೂರು ಜಿಲ್ಲೆ

 

ಸಿಂಧನೂರು: ತಾಲ್ಲೂಕಿನ ಮಾಹಾಮಾರಿ ಕೋವಿಡ್ ಎರಡನೇ ಅಲೆ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತಾಲೂಕು ಮಟ್ಟದ ಅಧಿಕಾರಿಗಳಿಂದ ಹಿಡಿದು. ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತರು, ನಗರ‌ ಸಭೆ ಸಿಬ್ಬಂದಿ ವರ್ಗ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿರಂತರವಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನ್ ವೈರಸ್ ಹರಡುವಿಕೆ ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದರೆ ತಾಲ್ಲೂಕಿನ ಕೋವಿಡ್ ತನ್ನ ಅಟ್ಟಹಾಸವನ್ನು ಮರೆಯುತ್ತಿದ್ದು.ಇಂದು ಒಟ್ಟು 344 ಜನರಿಗೆ ಸೊಂಕು ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ.

 ಅಥವಾ ಜನಸಾಮಾನ್ಯರ ನಮಗೆ ಬಂದಾಗ ನೋಡೋಣ ಎಂದು ಸರ್ಕಾರ,ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜಾರಿಗೆ ತಂದ ನಿಯಮಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ತೋರಿದ್ದ ಕಾರಣ ತಾಲ್ಲೂಕಿನ ಇಂದು ಕೊರೋನ್ ವೈರಸ್ ದ್ವಿಶತಕ ಬಾರಿಸಿದೆ ಎನ್ನುವ ಕುರಿತು ಅರಿತು ಕೊಂಡು .ಕೊರೋನ್ ನಿಯಂತ್ರಣಕ್ಕೆ ಅಧಿಕಾರಿ ಸಮೂಹಕ್ಕೆ ತಾಲ್ಲೂಕಿನ ಜನರು ಕೈ ಜೋಡಿಸಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ ಎನ್ನುವದು ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.

Share and Enjoy !

Shares