ಕವಿತಾಳ :ಪೊಲೀಸ್ ಠಾಣೆ ಸಿಬ್ಬಂದಿ ವತಿಯಿಂದ ಕರೋನಾ ಬಗ್ಗೆ ಜಾಗೃತಿ ಕಾರ್ಯಕ್ರಮ

Share and Enjoy !

Shares
Listen to this article

 

ವಿಜಯನಗರವಾಣಿ  ಸುದ್ದಿ

 ಕವಿತಾಳ:ಪಟ್ಟಣ ಸಮೀಪದ ಹಾಲಾಪೂರು ಮತ್ತು ತುಗ್ಗಲದಿನ್ನಿ ಗ್ರಾಮದಲ್ಲಿ ಇಂದು  ಪೊಲೀಸ್ ಠಾಣೆ ಸಿಬ್ಬಂದಿ ವತಿಯಿಂದ ಕರೋನಾ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದರು.  

  ನಂತರ ಮಾತನಾಡಿದ ಪೊಲೀಸ ಸಿಬ್ಬಂದಿ ಶಿವಕುಮಾರ ರಾಥೋಡ್ ಮಾತನಾಡಿ ರಾಜ್ಯದಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದಾಗಿ ಸಾರ್ವಜನಿಕರಿಗೆ ಭಯದ ವಾತಾವರಣ ಉಂಟಾಗಿದೆ ಮತ್ತು ಜನರು ಅನಾವಶ್ಯಕ ಮಾಸ್ಕ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಡಿಕೊಳ್ಳದೇ ತಿರುಗಾಡತ್ತಿದ್ದಾರೆ ಇದರಿಂದಾಗಿ ಖಾಯಿಲೆ ಇನ್ನಷ್ಟು ವ್ಯಾಪಕವಾಗಿ ಹರಡುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಹೇಳಿದರು.

ಸಾರ್ವಜನಿಕರು ರಸ್ತೆಯಲ್ಲಿ ಅನವಶ್ಯಕವಾಗಿ ಓಡಾಡುವುದು ಕಡಿಮೆ ಮಾಡಬೇಕು ಮತ್ತು ರಸ್ತೆಯಲ್ಲಿ ಅಂಬುಲೆನ್ಸ್ ವಾಹನಗಳು ಬರುವ ವೇಳೆಗೆ ದಾರಿ ಮಾಡಿ ಕೊಡಬೇಕು. ತುರ್ತು ಜೀವಗಳ ಕಾಪಾಡಲು ಕಾರಣ ಕರ್ತರಬೇಕು. ಮಧ್ಯ ಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಮತ್ತು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿಬೇಕು. ಪೊಲೀಸ್ ಇಲಾಖೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು ,112 ನಿಮ್ಮ ಮಿತ್ರ ವಾಹನವು ಪೊಲೀಸರಿಗೆ ಮತ್ತಷ್ಟು ಬಲ ತುಂಬಲು ಸಹಕಾರಿ ಆಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.. 

ಈ ಸಂದರ್ಭದಲ್ಲಿ ಹಾಲಾಪೂರು ಮತ್ತು ತುಗ್ಗಲದಿನ್ನಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

Share and Enjoy !

Shares