708ಹಳ್ಳಿಗಳಲ್ಲಿ 5010 ಸಕ್ರಿಯ ಪ್ರಕರಣಗಳು,
ಪ್ರತಿ ಗ್ರಾಪಂಗಳಲ್ಲಿ ಕುಟುಂಬ ಸಂರಕ್ಷಣಾ ಟಾಸ್ಕ್‍ಫೋರ್ಸ್ ಆ್ಯಕ್ಟಿವ್
ಬಳ್ಳಾರಿ,ಮೇ25 : ಇಡೀ ದೇಶಕ್ಕೆ ದೇಶವೇ ಕೊರೊನಾ ಮಹಮಾರಿಯಿಂದ ತತ್ತರಿಸುತ್ತಿದ್ದರೇ ಬಳ್ಳಾರಿ ಜಿಲ್ಲೆಯಲ್ಲಿರುವ 330 ಹಳ್ಳಿಗಳು ಕೊರೊನಾ ಸೊಂಕಿನಿಂದ ಅತ್ಯಂತ ಸುರಕ್ಷಿತವಾಗಿವೆ. ಜಿಲ್ಲೆಯಲ್ಲಿರುವ 11 ತಾಲೂಕುಗಳ ಒಟ್ಟು 237 ಗ್ರಾಮ ಪಂಚಾಯತಿ ವ್ಯಾಪ್ತಿಯ 1038 ಗ್ರಾಮಗಳ ಪೈಕಿ 330 ಗ್ರಾಮಗಳಲ್ಲಿ ಇದುವರೆಗೂ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಎಂದು ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 12042 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 7032 ಜನರು ಸೊಂಕಿನಿಂದ ಗುಣಮುಖರಾಗಿದ್ದು,ಇನ್ನೂ 5010 ಸಕ್ರಿಯ ಪ್ರಕರಣಗಳಿವೆ. 147 ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಮತ್ತು 561 ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಅವರು ಬಿಡುಗಡೆ ಮಾಡಿರುವ ಕೋವಿಡ್ ಕುರಿತ ವರದಿಯಲ್ಲಿ ತಿಳಿಸಲಾಗಿದೆ.
ಬಳ್ಳಾರಿ ತಾಲೂಕಿನಲ್ಲಿ 22,ಹಡಗಲಿ ತಾಲೂಕಿನಲ್ಲಿ 30,ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 21,ಹರಪನಳ್ಳಿ ತಾಲೂಕಿನಲ್ಲಿ 91,ಹೊಸಪೇಟೆ ತಾಲೂಕಿನಲ್ಲಿ 11,ಕಂಪ್ಲಿ ತಾಲೂಕಿನಲ್ಲಿ 10,ಕೊಟ್ಟೂರು ತಾಲೂಕಿನಲ್ಲಿ 20,ಕೂಡ್ಲಿಗಿ ತಾಲೂಕಿನಲ್ಲಿ 61,ಸಂಡೂರು ತಾಲೂಕಿನಲ್ಲಿ 38 ಮತ್ತು ಸಿರಗುಪ್ಪ ತಾಲೂಕಿನಲ್ಲಿ 26 ಹಳ್ಳಿಗಳು ಕೊರೊನಾ ಸೊಂಕಿನಿಂದ ಸುರಕ್ಷಿತವಾಗಿರುವುದು ವಿಶೇಷ.
ಕೋವಿಡ್ ಸೋಂಕು ಕುರಿತು ತಾಲೂಕುವಾರು ವರದಿಯ ವಿವರ: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 26 ಗ್ರಾಪಂಗಳು ಬರುತ್ತಿದ್ದು,112 ಹಳ್ಳಿಗಳ ಪೈಕಿ 74 ಹಳ್ಳಿಗಳಲ್ಲಿ 1784 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸದ್ಯ 590 ಸಕ್ರಿಯ ಪ್ರಕರಣಗಳಿವೆ.
ಬಳ್ಳಾರಿ ತಾಲೂಕಿನಲ್ಲಿ 25 ಗ್ರಾಪಂಗಳು ಬರಲಿದ್ದು,69 ಹಳ್ಳಿಗಳ ಪೈಕಿ 47 ಹಳ್ಳಿಗಳಲ್ಲಿ 1417 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು;ಸದ್ಯ 289 ಸಕ್ರಿಯ ಪ್ರಕರಣಗಳಿವೆ. ಅದೇ ರೀತಿ ಹರಪನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ 37 ಗ್ರಾಪಂಗಳು ಬರಲಿದ್ದು,ಅವುಗಳ ವ್ಯಾಪ್ತಿಯಲ್ಲಿರುವ 225 ಹಳ್ಳಿಗಳ ಪೈಕಿ 134 ಹಳ್ಳಿಗಳಲ್ಲಿ 1307 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 674 ಸಕ್ರಿಯ ಪ್ರಕರಣಗಳಿವೆ.
ಕೂಡ್ಲಿಗಿ ತಾಲೂಕಿನಲ್ಲಿ 25 ಗ್ರಾಪಂಗಳಿದ್ದು,155 ಹಳ್ಳಿಗಳಿವೆ;ಅವುಗಳ ಪೈಕಿ 94ಹಳ್ಳಿಗಳಲ್ಲಿ 1265 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 390 ಸಕ್ರಿಯ ಪ್ರಕರಣಗಳು ಸದ್ಯ ಇವೆ.
ಹೆಚ್.ಬಿ ಹಳ್ಳಿ ತಾಲೂಕಿನಲ್ಲಿ 21 ಗ್ರಾಪಂಗಳಿದ್ದು,97 ಹಳ್ಳಿಗಳಿವೆ;ಈ ಹಳ್ಳಿಗಳ ಪೈಕಿ76ಹಳ್ಳಿಗಳಲ್ಲಿ 1181 ಪಾಸಿಟಿವ್ ಪ್ರಕರಣಗಳಿ ದಾಖಲಾಗಿದ್ದು, ಸದ್ಯ 593 ಸಕ್ರಿಯ ಪ್ರಕರಣಗಳಿವೆ.
ಸಿರುಗುಪ್ಪ ತಾಲೂಕಿನಲ್ಲಿ 27 ಗ್ರಾಪಂಗಳಿದ್ದು;ಇಲ್ಲಿರುವ 85 ಹಳ್ಳಿಗಳ ಪೈಕಿ 59ಹಳ್ಳಿಗಳಲ್ಲಿ 1125 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 556 ಸಕ್ರಿಯ ಪ್ರಕರಣಗಳಿವೆ. ಹೊಸಪೇಟೆ ತಾಲೂಕಿನಲ್ಲಿ 14 ಗ್ರಾಪಂಗಳಿದ್ದು,62 ಹಳ್ಳಿಗಳ ಪೈಕಿ 51ಹಳ್ಳಿಗಳಲ್ಲಿ 1112 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 505 ಸಕ್ರಿಯ ಪ್ರಕರಣಗಳಿವೆ. ಹಡಗಲಿ ತಾಲೂಕಿನಲ್ಲಿ 26 ಗ್ರಾಪಂಗಳಿದ್ದು,ಅವುಗಳ ವ್ಯಾಪ್ತಿಗಿರುವ 111 ಹಳ್ಳಿಗಳ ಪೈಕಿ 81ಹಳ್ಳಿಗಳಲ್ಲಿ 1039 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 540 ಸಕ್ರಿಯ ಪ್ರಕರಣಗಳಿವೆ. ಕುರುಗೋಡು ತಾಲೂಕಿನಲ್ಲಿ 12 ಗ್ರಾಪಂಗಳಿದ್ದು,ಈ ತಾಲೂಕಿನಲ್ಲಿರುವ ಎಲ್ಲ 28ಹಳ್ಳಿಗಳಲ್ಲಿ ಕೊವಿಡ್ ಸೊಂಕಿಗೆ ತುತ್ತಾಗಿವೆ. ಇಲ್ಲಿ 842 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು, ಸದ್ಯ 472 ಸಕ್ರಿಯ ಪ್ರಕರಣಗಳಿವೆ. ಕಂಪ್ಲಿ ತಾಲೂಕಿನಲ್ಲಿ 10 ಗ್ರಾಪಂಗಳಿದ್ದು 33 ಹಳ್ಳಿಗಳ ಪೈಕಿ 23ಹಳ್ಳಿಗಳಲ್ಲಿ 573 ಪಾಸಿಟಿವ್ ಪ್ರಕರಣ ದಾಖಲಾಗಿದ್ದು,188 ಸಕ್ರಿಯ ಪ್ರಕರಣಗಳಿವೆ.
ಕೊಟ್ಟೂರು ತಾಲೂಕಿನಲ್ಲಿ 14 ಗ್ರಾಪಂಗಳಿದ್ದು,61 ಹಳ್ಳಿಗಳಿವೆ;ಅವುಗಳ ಪೈಕಿ 41 ಹಳ್ಳಿಗಳಲ್ಲಿ 397 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 213 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಲ್ಲಿ ಗ್ರಾಪಂ ಟಾಸ್ಕ್‍ಫೋರ್ಸ್‍ಗಳನ್ನು ಕ್ರಿಯಾಶೀಲಗೊಳಿಸಲಾಗಿದೆ. ಇದರ ಜೊತೆಗೆ ಕುಟುಂಬ ಸಂರಕ್ಷಣಾ ಟಾಸ್ಕ್‍ಫೋರ್ಸ್ ರಚಿಸಲಾಗಿದ್ದು, ಪ್ರತಿ 50 ಮನೆಗಳಿಗೆಒಂದರಂತೆ ತಂಡಗಳನ್ನು ರಚಿಸಲಾಗಿದ್ದು, ಈ ತಂಡದ ಸದಸ್ಯರು ಮನೆ-ಮನೆಗೆ ಭೇಟಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯ ಸಂದರ್ಭದಲ್ಲಿ ಜ್ವರ,ಶೀತ,ಕೆಮ್ಮುವಿನಂತ ಲಕ್ಷಣಗಳು ಕಂಡುಬಂದಲ್ಲಿ ಜನರಲ್ ಮೆಡಿಕಲ್ ಕಿಟ್ ನೀಡಲಾಗುತ್ತದೆ.;ಮೂರು ದಿನಗಳಲ್ಲಿ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಆರೋಗ್ಯ ಸಿಬ್ಬಂದಿ ರ್ಯಾಪಿಡ್ ಆಂಟಿಜೆನ್ ಕಿಟ್ ಮುಖಾಂತರ ತಪಾಸಣೆ ನಡೆಸಿ ಪಾಸಿಟಿವ್ ಬಂದಲ್ಲಿ ಕೋವಿಡ್ ಕಿಟ್ ನೀಡಲಿದ್ದಾರೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದ್ದಾರೆ.