ನಗರದಲ್ಲಿ ಆಹಾರ ನೀರು ಹಂಚಿದ ಯುವಕರು.
ವಿಜಯನಗರವಾಣಿ
ಮಾನ್ವಿ: ನಗರದ ಸಂಗಾಪುರ ರಸ್ತೆ,ಮುಷ್ಠೂರ ರಸ್ತೆಯ ನಿವಾಸಿಗಳು ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಹಾಗೂ ಕರೋನ ವಾರಿಯರ್ಸ್ ಗಳಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಿ ವಾರ್ಡಿನ ಯುವಕರು ಹಂಚಿದರು.
ಸುಧಾಕರ್ ಗೌಡ ಮಾತನಾಡಿ ಸರ್ಕಾರವು ಕರೋನ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿದ್ದು ನಗರದಲ್ಲಿ ಅನಾಥರಿಗೆ ಲಾರಿ ಚಾಲಕರಿಗೆ ಭಿಕ್ಷುಕರಿಗೆ ಆಹಾರ ಸಿಗದೆ ಪರದಾಡುತ್ತಿದ್ದು ಪರಿಸ್ಥಿತಿ ನಿರ್ಮಾಣವಾಗಿದ್ದು. ದೇವರು ಕರ್ತವ್ಯದಲ್ಲಿರುವ ಕರೋನ ವಾರಿಯರ್ಸ್ ಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಆಗಮಿಸಿರುವ ರೊಗಿಗಳಿಗೆ ಆಹಾರ ದೊರೆಯದೆ ತೊಂದರೆಯಲ್ಲಿದ್ದು ಅವರಿಗೆ ಆಹಾರ ಒದಗಿಸುತ್ತಿದ್ದೇವೆ ಎಂದರು.
ಸುಭಾಷ್ ಜನಾರ್ದನ್ ಪ್ರಸನ್ನ ಮಾಂತೇಶ ನಾಗರಾಜ್ ಅಂಬರೀಷ್ ಧನರಾಜ್ ಆಂಜನೇಯ ಸೇರಿದಂತೆ ಇನ್ನಿತತರು ಉಪಸ್ತಿತರಿದ್ದರು