ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಅಂಗಡಿಗಳ ಮಾಲೀಕರು ದಿನನಿತ್ಯದ ವಸ್ತುಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದು ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ರಾತ್ರಿ ವೇಳೆ ವ್ಯಾಪಾರ ಮಾಡುತ್ತಾರೆ ವ್ಯಾಪಾರ ಮಾಡಲು ಸಹಕಾರ ನೀಡಿದ ಪುರಸಭೆ ಅಧಿಕಾರಿಗಳ ಮೇಲೆ ಮತ್ತು ಅಂಗಡಿಗಳ ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್ ಎ ನಯೀಮ್ ನೇತೃತ್ವದಲ್ಲಿ ಉಪತಹಶೀಲ್ದಾರ ಮೂಲಕ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು,
ಇದೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಾದ ಎಸ್ ಎನ್ ಖಾದ್ರಿ, ಸಾಬು ಹುಸೇನ, ಮಹಾಂತೇಶ ಚೆಟ್ಟರ, ನಾಗರಾಜ ನಾಯಕ, ಅವೇಜ್ ಪಾಶ ಇದ್ದರು,