ಕಂಪ್ಲಿ : 6ನೇ ವಾರ್ಡಿನಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ ಔಷಧಿ ಸಿಂಪಡಣೆ

Share and Enjoy !

Shares

 

ವಿಜಯನಗರವಾಣಿ ಸುದ್ದಿ

ಕಂಪ್ಲಿ: ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನಲೆ ಪುರಸಭೆ ಸದಸ್ಯ ಭಟ್ಟ ಪ್ರಸಾದ್ ಅವರು ಪಟ್ಟಣದ 6ನೇ ವಾರ್ಡಿನ ವಿನಾಯಕನಗರದ 10ನೇ ಕ್ರಾಸ್ ಬಳಿಯಲ್ಲಿ ಬ್ಲೀಚಿಂಗ್ ಮತ್ತು ಟೆಟಲಾ ಮಿಶ್ರಣ ಔಷಧ ಸೋಮವಾರ ಸಿಂಪಡಣೆ ಮಾಡಲಾಯಿತು.

ನಂತರ ಸದಸ್ಯ ಭಟ್ಟ ಪ್ರಸಾದ್ ಮಾತನಾಡಿ, ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಲ್ಲಿನ 6ನೇ ವಾರ್ಡಿನಲ್ಲಿ ಕೋವಿಡ್ ಪ್ರಕರಣಗಳು ಉಲ್ಭಣಗೊಳ್ಳುತ್ತಿರುವ ಪರಿಣಾಮ ವಾರ್ಡಿನ ಪ್ರತಿ ಓಣಿಗಳಲ್ಲಿ ಬ್ಲೀಚಿಂಗ್ ಪೌಡರ್ ಮತ್ತು ಟೆಟಾಲ್ ಮಿಶ್ರಿತ ಔಷಧಿ ಸಿಂಪಡಣೆ ಮಾಡಲಾಯಿತು. ಹೆಮ್ಮಾರಿ ಕೊರೋನಾದಿಂದ ಸಾಕಷ್ಟು ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ಕೆ.ಎಸ್.ಚಾಂದ್ ಭಾಷಾ, ಮುಖಂಡರಾದ ಕೋನಂಕಿ ಬಾಲಕೃಷ್ಣ, ಜಯಪ್ರಕಾಶ್, ಎಂ.ನಾಗರಾಜ ಸಹಯೋಗದಲ್ಲಿ ಆಕ್ಸಿಜನ್ ಬೆಡ್ ಸಿಗದವರಿಗೆ ಆಕ್ಸಿಜನ್ ಸಲಕರಣೆಗಳನ್ನು ಒದಗಿಸಲಾಗುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ಸುಮಾರು 80 ಸಾವಿರದಿಂದ ಒಂದು ಲಕ್ಷವರೆಗಿನ ವೆಚ್ಚದಲ್ಲಿ ಆಕ್ಸಿಜನ್ ಸಲಕರಣೆಗಳ ಕಿಟ್ ಸಂಗ್ರಹಿಸಲಾಗಿದೆ. ಕಂಪ್ಲಿಯಲ್ಲಿ 9 ಜನರಿಗೆ ಆಕ್ಸಿಜನ್ ಸಲಕರಣೆಗಳ ಕಿಟ್ ಒದಗಿಸಲಾಗಿದೆ. ಆಕ್ಸಿಜನ್ ಬೆಡ್ ಸಿಗದವರಿಗೆ ಆಕ್ಸಿಜನ್ ಕಿಟ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಆಕ್ಸಿಜನ್ ಬೆಡ್ ಸಿಗದವರು ಮನೆಯಲ್ಲೇ ಆಕ್ಸಿಜನ್ ವ್ಯವಸ್ಥೆಯೊಂದಿಗೆ ಪ್ರತಿದಿನ 15 ಸಾವಿರ ಉಳಿಸಿಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಭಾಷಾ, ಮುಖಂಡರಾದ ಕೋನಂಕಿ ಬಾಲಕೃಷ್ಣ, ಜಯಪ್ರಕಾಶ್, ಎಂ.ನಾಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

25 ಕಂಪ್ಲಿ ೦1: ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನಲೆ ಪುರಸಭೆ ಸದಸ್ಯ ಭಟ್ಟ ಪ್ರಸಾದ್ ಅವರು ಪಟ್ಟಣದ 6ನೇ ವಾರ್ಡಿನ ವಿನಾಯಕನಗರದ 10ನೇ ಕ್ರಾಸ್ ಬಳಿಯಲ್ಲಿ ಬ್ಲೀಚಿಂಗ್ ಮತ್ತು ಟೆಟಲಾ ಔಷಧ ಸೋಮವಾರ ಸಿಂಪಡಣೆ ಮಾಡಲಾಯಿತು

Share and Enjoy !

Shares