ಕೋವಿಡ್‍ನಿಂದ ಅಂಗನವಾಡಿ ಕಾರ್ಯಕರ್ತೆ ಸಾವು:30ಲಕ್ಷ ಪರಿಹಾರ ವಿತರಣೆ

Share and Enjoy !

Shares
Listen to this article

 

ವಿಜಯನಗರ ವಾಣಿ ಸುದ್ದಿ :

ಹೊಸಪೇಟೆ(ವಿಜಯನಗರ ಜಿಲ್ಲೆ),ಮೇ 26 ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ 15ನೇ ವಾರ್ಡ-2ನೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಶಾರದಾ ಅವರು ಕೋವಿಡ್-19ರ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೋವಿಡ್-19ನಿಂದ 2020 ಆಗಸ್ಟ್ 19ರಮದು ಮರಣಹೊಂದಿದ ಹಿನ್ನೆಲೆ ಅವರ ವಾರಸುದಾರರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 30ಲಕ್ಷ ರೂ.ಗಳ ಮರಣ ಪರಿಹಾರವನ್ನು ಬುಧವಾರ ವಿತರಿಸಲಾಯಿತು.

ಹುಡಾ ಅಧ್ಯಕ್ಷ ಅಶೋಕ್ ಜೀರೆ ಅವರು ಶಾರದಾ ಅವರ ಮಗಳಾದ ಉಷಾ ಅವರಿಗೆ ಮರಣ ಪರಿಹಾರ ಮೊತ್ತವನ್ನು ವಿತರಿಸಿದರು. ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ್,ಮುಖಂಡರಾದ ಧರ್ಮೇಂದ್ರ ಸಿಂಗ್, ಸಂದೀಪ್‍ಸಿಂಗ್ ಮತ್ತಿತರರು ಇದ್ದರು.

Share and Enjoy !

Shares