ಡಿ.ಎಸ್. ಹೂಲಗೇರಿ ಶಾಸಕರು ಮಾಜಿ ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಭೇಟಿ ರಾಯಚೂರು ಜಿಲ್ಲೆಯ ಲಿಂಗಸುಗೂರು ;

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ರಾಯಚೂರು  ಜಿಲ್ಲೆಯ  ಲಿಂಗಸುಗೂರು   ; ವಿಧಾನಸಭಾ ಕ್ಷೇತ್ರ ಇವರು ಇಂದು ಬೆಂಗಳೂರಿನಲ್ಲಿ  ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು  ಭೇಟಿಯಾಗಿ. ಕೋವಿಡ್-19 ಎರಡನೇ ಅಲಿ ವ್ಯಾಪಕವಾಗಿ ಹರಡುತ್ತಿದ್ದು ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಕೋರೋನ ಸೋಂಕಿತರು ಮತ್ತು ಬ್ಲ್ಯಾಕ್ ಪಂಗಸ ರೋಗಿಗಳು ಪತ್ತೆ ಯಾಗುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅತ್ಯುನ್ನತ ದರ್ಜೆಯ ಆಸ್ಪತ್ರೆಗಳ ಕೊರತೆ, ಹಾಗೂ ಜಿಲ್ಲೆಗೆ ಆಕ್ಸಿಜನ್, ವೆಂಟಿಲೇಟರ್, ರೆಮಡಿ ಸಿವಿಯರ್ ಇಂಜೆಕ್ಷನ್ ಗಳನ್ನು ಸರಿಯಾದ ವೇಳೆಗೆ ಸರಬರಾಜು ಮಾಡಲು ಮತ್ತು ಹಟ್ಟಿ  ಚಿನ್ನದ ಗಣಿ ಕಂಪನಿ ವತಿಯಿಂದ ಹಟ್ಟಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ ಮಾದರಿಯಂತೆ ಕ್ಯಾಂಟೀನ ಪ್ರಾರಂಭಿಸಲು  ತಾಲೂಕಿನಲ್ಲಿ ನೀರಾವರಿ, ವಿದ್ಯುತ್, ಕೃಷಿ ಇನ್ನು ಮುಂತಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲು ರಾಜ್ಯಸರ್ಕಾರಕ್ಕೆ ಒತ್ತಾಯಿಸುವಂತೆ ಮಾನ್ಯ ಶಾಸಕರು ಚರ್ಚಿಸಿದರು .

 

ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಶಾಸಕರಾದ  ಬಸನಗೌಡ ದದ್ದಲ್ ರವರು ಉಪಸ್ಥಿತರಿದ್ದರು…

Share and Enjoy !

Shares