ಬಳ್ಳಾರಿ :ಕೋವಿಡ್ ಲಸಿಕೆ ಪಡೆದ ಜೆಸ್ಕಾಂ ನೌಕರರು

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಬಳ್ಳಾರಿ

ಬಳ್ಳಾರಿ,ಮೇ26 : ಸರ್ಕಾರ ಜೆಸ್ಕಾಂ ನೌಕರರನ್ನು ಫ್ರೆಂಟ್‍ಲೈನ್ ವಾರಿಯರ್ಸ್ ಎಂದು ಘೋಷಿಸಿದ್ದು, ಜಿಲ್ಲೆಯ ಜೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ಇಂಜಿನಿಯರ್‍ಗಳು ಹಾಗೂ ಲೈನ್‍ಮ್ಯಾನ್‍ಗಳು ನಗರದ ಕೆ.ಇ.ಬಿ ಇಂಜಿನಿಯರ್ಸ್ ಅಸೋಶಿಯೇಷನ್ ಸಭಾಂಗಣದಲ್ಲಿ ಮಂಗಳವಾರ ಲಸಿಕೆ ಪಡೆದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎರಡು ದಿನದ ವಿಶೇಷ ಕೋವಿಡ್ ಲಸಿಕಾ ಶಿಬಿರವು ಮಂಗಳವಾರ ಮುಕ್ತಾಯವಾಯಿತು. ಶಿಬಿರದಲ್ಲಿ 459 ಜನ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಸಿಬ್ಬಂದಿಯವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.  ಅಭಿಯಂತರರಾದ ವೆಂಕಟೇಶ್ ಅವರು ಶೀಬಿರ ಉದ್ಘಾಟಿಸಿದರು. ಶಿಬಿರ ನಡೆಸಲು ರೆಡ್ ಕ್ರಾಸ್ ಸಂಸ್ಥೆಯ ಸರ್ವ್ ಸ್ವಯಂಸೇವಕರು ಸಹಕರಿಸಿದರು. 

ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಾದ ಅಸ್ಮಾ ಖಾತೂನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್, ಹುಸೇನ್ ಸಾಬ್, ಮಹಮ್ಮದ್ ಷರೀಫ್, ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸರ್ವ್ ಸ್ವಯಂ ಸೇವಕರಾದ ಅಶೋಕ್ ಜೈನ್, ಹರಿಶಂಕರ್, ಶ್ವೇತಾ, ತೇಜಸ್ ಮತ್ತು ಪವನ್ ಮತ್ತು ಇತರರು ಇದ್ದರು.

Share and Enjoy !

Shares