ಹಟ್ಟಿಚಿನ್ನದಗಣಿ ವತಿಯಿಂದ 5 ಕೋಟಿ ರೂಪಾಯಿ ಚೆಕ್ ಸಿಎಂ ನಿಧಿಗೆ ವಿತರಣೆ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ :

 

ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಟ್ಟಿ ಚಿನ್ನದ ಗಣಿಯ

ಅಧ್ಯಕ್ಷರಾದ ಶ್ರೀ ಮಾನಪ್ಪ ಡಿ ವಜ್ಜಲ್ ಅವರು  ಕೊರೊನ ವಿರುದ್ದ ಹೊರಾಡುತ್ತಿರುವ ರಾಜ್ಯ ಸರಕಾರಕ್ಕೆ ಪುರಕವಾಗಿ ಹಟ್ಟಿ ಚಿನ್ನದ ಗಣಿ ವತಿಯಿಂದ 5 ಕೋಟಿ ರೂಪಾಯಿಗಳ ಚೆಕ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ

ಶ್ರೀ ಬಿ ಎಸ್ ಯಡಿಯೂರಪ್ಪ ಜೀ ಅವರಿಗೆ  ನೀಡಿದರು ಈ ಸಂದರ್ಭದಲ್ಲಿ  ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸನ್ ಮಾನ್ಯ ಶ್ರೀ ಮುರಗೇಶ ನಿರಾಣಿ ರವರ ಹಾಗೂ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಯವರು ಉಪಸ್ಥಿತರಿದ್ದರು

 

ಇದೆ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಜೀ ಅವರಿಗೆ ಶ್ರೀ ಮಾನಪ್ಪ ಡಿ ವಜ್ಜಲ್ ಅವರು ಲಿಂಗಸುಗುರು ತಾಲ್ಲೂಕಿನಲ್ಲಿ ದಿನಾದಿಂದ ದಿನಕ್ಕೆ ವ್ಯಾಪಕವಾಗಿ ಹರಡುತಿರುವ ಕೋರೋನ ವೈರಾಣು ತಡೆಗಟ್ಟಲು ‌ನಮ್ಮ ತಾಲ್ಲೂಕಿನ ಕೋವಿಡ್ 19 ಸೇನಾನಿಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ನಮ್ಮ ಕ್ಷೇತ್ರಕ್ಕೆ ಇನ್ನು ಅಗತ್ಯ ಸೌಲಭ್ಯಗನ್ನ ಒದಗಿಸಿ ಆಮ್ಲಜನಕದ ಕೊರತೆಯಾಗದಂತೆ ಇರಲು ಹೆಚ್ಚಿನ ಆಮ್ಲಜನಕ ಮತ್ತು ಅಗತ್ಯ ಔಷಧ ಕೀಟ್ ಗಳನ್ನ ನೀಡಲು ಮನವಿ ಮಾಡಿದರು. ಮಾನ್ಯ ಮುಖ್ಯಮಂತ್ರಿ ಶ್ರೀ ಮಾನಪ್ಪ ಡಿ ವಜ್ಜಲ್ ರವರ ಮನವಿಗೆ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸಿದರು.

Share and Enjoy !

Shares