ಇರುವ ಸತ್ಯವನ್ನು ಬರೆದರೆ ವರದಿಗಾರರ ಮೇಲೆ ರೇಗಾಡಿದ ಅಧಿಕಾರಿ.ವಸ್ತು ಸ್ಥಿತಿ ಒಪ್ಪಿಕೊಳ್ಳದೆ , ದರ್ಪದಿ ಮಾತನಾಡುವ ಪಿಡಿಓ

Share and Enjoy !

Shares
Listen to this article

ಹಟ್ಟಿ ಚಿನ್ನದ ಗಣಿ.

ಲಿಂಗಸುಗೂರು : ಸಮೀಪದ ಗೆಜ್ಜಲಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿ ಮರೆಮಾಚಿದ್ದ  ಸ್ವಚ್ಚತೆ,ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿ ಹೇಳಿಕೆ, ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು, ಸುದ್ದಿ ನೀಡಿದ ಅಧಿಕಾರಿಯು ವರದಿಗಾರರಿಗೆ ಕರೆ ಮಾಡಿ ಯಾರು ಹೇಳಿದ್ದು ನಿಮಗೆ ಸುದ್ದಿ ಮಾಡುವಂತೆ,ಯಾರು ನಿಮಗೆ ಮಾಹಿತಿ ನೀಡಿದವರು,ನನ್ನ ಪ್ರತಿಕ್ರಿಯೆ ಪಡೆಯದೆ ನೀವೇ ಹೇಗೆ ಸುದ್ದಿ ಮಾಡಿದಿರಿ? ಪಂಚಾಯತಿ ಕಚೇರಿಗೆ ಬಂದು ನಮ್ಮ ಪ್ರತಿಕ್ರಿಯೆ ಪಡೆದು ಸುದ್ದಿ ಮಾಡಬೇಕು ಅದು ಬಿಟ್ಟು ಪ್ರೆಸ್ಸ್ ರಿಪೋರ್ಟರ್ ಎಂದ ಮಾತ್ರಕ್ಕೆ ಏನಂದರದು ಬರೀಲಿಕ್ಕೆ ನಿಮಗೆ ಯಾರು ಅಧಿಕಾರ ಕೊಟ್ಟಿದ್ದು, ನಿಮ್ಮ ಪೇಪರ್ ರಿಜಿಸ್ಟರ್ ಆಗಿದೆಯಾ? ಬನ್ನಿ ಪಂಚಾಯತಿಗೆ ಏನು ಅಂತ ತೋರಿಸುತ್ತೇನೆ ಅಲ್ಲಿನ ಸ್ಥಳೀಯ ಮುಖಂಡ ಕರೆಸಿ ನಾನು ಏನೆಂದು ತಿಳಿಯುತ್ತದೆ ನಿಮಗೆ  ಎಂಬ ದರ್ಪದ ಮಾತನಾಡಿದ್ದು  ,ವರದಿಗಾರರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿರುವ ಪಿಡಿಓ ಇರುವ ಸತ್ಯ ಸಂಗತಿ ಒಪ್ಪಿಕೊಳ್ಳಲು ತಯಾರಿಲ್ಲ ಅದಕ್ಕೆ ನಮ್ಮ ವರದಿಗಾರರು ಸಮಾಧಾನದಿಂದ ಉತ್ತರಿಸಿದ್ದು ಪತ್ರಿಕೆ PDF ಹಾಕಿದ್ದೇನೆ ಮೇಲೆ RNI no.ಇರುತ್ತೆ ನೋಡಿ ಅಧಿಕೃತವಾಗಿ ರಿಜಿಸ್ಟರ್ ಇಲ್ಲದೆ ಯಾರಾದರೂ ವರದಿಯಾಡುತ್ತರೆಯೇ? ಎಂದು ಕೇಳಿದ್ದು ಪಂಚಾಯ್ತಿಯ ಯಾವುದೇ ಸುದ್ದಿ ಇದ್ದರೂ ಅಧಿಕಾರಿಯನ್ನು ಕೇಳಿ ಸಿದ್ದು ಮಾಡುವ ದುರ್ಗತಿ ನಮಗೆ ಬಂದಿಲ್ಲ ಪತ್ರಿಕೆ ಧರ್ಮ ಏನೆಂದು ನನಗೆ ತಿಳಿದಿದೆ ಕೊಳಿನ ಕೇಳಿ ಮಸಾಲೆ ಅರೆಯುವ ಅವಶ್ಯಕತೆ ನನಗಿಲ್ಲ ಸ್ಥಳೀಯರು ಕೊಟ್ಟಿರುವ ಹೇಳಿರುವ ದಾಖಲಾತಿ ಆಧರಿಸಿ ಸುದ್ದಿ ಮಾಡಿದ್ದೇನೆ ಎಂದು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. 

ಇಂತಹ ಪಿಡಿಓ ಹಾಕು ಇರುವುದರಿಂದ ವಸ್ತು ಸ್ಥಿತಿ ಅರಿತು ಸುದ್ದಿ ಮಾಡಿದರು ಒಪ್ಪಿಕೊಳ್ಳುವ ಮನಸ್ಸು ಇಲ್ಲದ ಇಂತವರು ಇನ್ನೂ ಯಾವ ರೀತಿ ಅಭಿವೃದ್ಧಿ ಮಾಡ್ಯಾರ ಎನ್ನುವುದು ತಿಳಿಯದಂತೆ ಆಗಿದೆ.

ಹಿರಿಯ ಅಧಿಕಾರಿಗಳು ಇವರಿಗೆ ತಿದ್ದು ಬುದ್ದಿ ಹೇಳಬೇಕು ಎನ್ನುವುದು ಜನಸಾಮಾನ್ಯರ  ಆಶೆಯ.

Share and Enjoy !

Shares