ಲಿಂಗಸುಗೂರು :ವೀರಾಪುರ ಗ್ರಾಮದಲ್ಲಿ ಮರೆಮಾಚಿದ ಸ್ವಚ್ಛತೆ.ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿ ಹೇಳಿಕೆ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಹಟ್ಟಿ ಚಿನ್ನದ ಗಣಿ.

ಲಿಂಗಸಗೂರು ತಾಲೂಕಿನ ಗೆಜ್ಜಲಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿ ಸ್ವಚ್ಛತೆ ಮರೆಮಾಚಿದ್ದು  ಚರಂಡಿ ನೀರಲ್ಲ ರಸ್ತೆ ಮೇಲೆ ಹರಿಯುತ್ತಿದ್ದು ಒಂದನೇ ವಾರ್ಡ್ ನ ದುರುಗಮ್ಮನ ದೇವಸ್ಥಾನದಿಂದ ಹಳ್ಳದವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು  ನಡೆದಾಡುವ  ಪರಸ್ಥಿತಿ ನಿರ್ಮಾಣವಾಗಿದೆ , ಕೋವಿಡ್ 19 ಸಾಂಕ್ರಾಮಿಕ ರೋಗವು ಹಳ್ಳಿಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು ,ರೋಗ ನಿಯಂತ್ರಣಕ್ಕೆ ಸರಕಾರಗಳು ಹರಸಾಹಸ ಪಡುತ್ತಿರುವುದು ನಮ್ಮೆಲ್ಲರ ಕಣ್ಮುಂದೆ ಕಾಣುತ್ತಿದೆ, ಇಂತಹ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವುದು ಆದ್ಯ ಕರ್ತವ್ಯವಾಗಿದೆ, ಇದನ್ನ ಸ್ಥಳೀಯ ಸರಕಾರ ಅಂದರೆ ಗ್ರಾಮ ಪಂಚಾಯತಿ  ನೋಡಿಕೊಳ್ಳಬೇಕಿದೆ .

 

ಹಳ್ಳಿಗಳಲ್ಲಿ ಯುವಕರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ,ಒಳ ಚರಂಡಿ ಸ್ವಚ್ಚಗೊಳಿಸಿ,ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಹಲವಾರುಬಾರಿ ಮನವಿ ಮಾಡಿದರು ಗೆಜ್ಜಲಗಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.  

ವೀರಾಪುರ ಗ್ರಾಮದ ಒಂದನೇ ವಾರ್ಡ್ ನಲ್ಲಿ ದುರುಗಮ್ಮ ದೇವಿ ದೇವಸ್ಥಾನದಿಂದ ಹಳ್ಳದವರೆಗು ಒಳ ಚರಂಡಿ ವ್ಯವಸ್ಥೆ ಮಾಡಿ ಅಲ್ಲಿಯವರೆಗೂ ಪೌರಕಾರ್ಮಿಕರಿಗೆ ಕನಿಷ್ಠ ಸ್ವಚ್ಚ ಗೊಳಿಸಿ ಎಂದು ಕೇಳಿಕೊಂಡಾಗ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೀವು ಮಾಡಿರುವ ಕೊಳಕು ನೀವೇ ಸ್ವಚ್ಚ ಮಾಡಿಕೊಳ್ಳಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಇದನ್ನು ಖಂಡಿಸಿದ ಯುವಕರು ಇತಂತಹ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿ  ಎಂದು ಹಿರಿಯ ಅಧಿಕಾರಿಗೆ ದೂರು ನೀಡಲು ಸಿದ್ದರಾದಾಗ ಗ್ರಾಮದ ಹಿರಿಯರು ಮತ್ತು ಚುನಾಯಿತ ಪ್ರತಿನಿಧಿಗಳು ಯುವಕರನ್ನು ತಡೆದು ಇನ್ನೇನು ಕೆಲವೇ ದಿನಗಳಲ್ಲಿ ಸರಿಮಾಡಿಸಿ ಕೊಡಲಿದ್ದಾರೆ ಎಂದು ಹೇಳಿದರು,

 

ಬಾಕ್ಸ್.1 ಜನಪ್ರತಿನಿಧಿಯ ಸ್ಪಷ್ಟನೆ.

ಗ್ರಾಮದ ಯುವ ನಾಯಕ ಜನಪ್ರತಿನಿಧಿ  ಸುದ್ದಿಗಾರರೊಂದಿಗೆ ಮಾತನಾಡಿ ಸಮಸ್ಯೆ ಇರುವುದಂತೂ ಸತ್ಯ ಸಂಗತಿ. ಆದಷ್ಟು ಬೇಗ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದು ,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೀಗೆ ಜವಾಬ್ದಾರಿ ಇಲ್ಲದವರಂತೆ  ಮಾತನಾಡಬಾರದು  ಅವರಿಗೆ ಜನಪ್ರತಿನಿಧಿಗಳು ಹೇಳಿ ಕೆಲಸ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.ಇದೆ ಸಂದರ್ಭದಲ್ಲಿ ಅವರು ಗ್ರಾಮ  ಪಂಚಾಯತಿಯಲ್ಲಿ ಪೌರ ಕಾರ್ಮಿಕರಿಗೆ ಹಲವಾರು ವರ್ಷಗಳಿಂದ ವೇತನ ನೀಡಿಲ್ಲ  ಹಾಗಾಗಿ ಪೌರ ಕಾರ್ಮಿಕರ ಕೆಲಸ ಮಾಡುತ್ತಿದ್ದರೂ ಅವರಿಗೆ ಯಾಕೆ ವೇತನ ನೀಡಿಲ್ಲ ಎನ್ನುವುದೇ  ಯಕ್ಷ ಪ್ರಶ್ನೆ, ಇನ್ನೂ ಕಾಣದ ಕೈಗಳು ಕೆಲಸ ಮಾಡುತ್ತಿದ್ದು ಪೌರ ಕಾರ್ಮಿಕರನ್ನು ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ   ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

 

ಕೋವಿಡ್ ಬಿಕ್ಕಟ್ಟಿನಲ್ಲಿ  ಜನರು ಅದರಲ್ಲೂ ಕೂಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟದ ಕೆಲಸವಾಗಿದೆ ಅಂತಹದ್ದರಲ್ಲಿ ಸಾಂಕ್ರಾಮಿಕ ರೋಗ ಹಾರಾಡುವ ವಾತಾವರಣ ನಿರ್ಮಾಣ ಆದರೆ ಬದುಕು ಇನ್ನೂ ದುಸ್ತರ ಆಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ,ಇದಕ್ಕೆ ಕೂಡಲೇ ಎಚ್ಚೆತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸ್ವಚ್ಚತಾ ಕಾರ್ಯ ಮಾಡು saamànya ಜನರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಬಯಸು ಗ್ರಾಮಸ್ಥರು.

Share and Enjoy !

Shares