ಸಾರ್ವಜನಿಕರು ಕೊರೊನಾ ವ್ಯಾಕ್ಸಿನೇಷನ್‌ ಪಡೆಯಿರಿ- ಶಂಭುಸೋಮನಾಥ ಶ್ರೀಗಳು

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

 

ಗಬ್ಬೂರು:28, ಪಟ್ಟಣದ ಸಾರ್ವಜನಿಕ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನೇಷನ್‌ ಪಡೆಯಲು ಬೇಟಿ ನೀಡಿದ ರಾಯಚೂರು ತಾಲ್ಲೂಕಿನ ಸುಲ್ತಾನಪೂರ ಗ್ರಾಮದ ಬೃಹನ್ಮಠ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಶಂಭು ಸೋಮನಾಥ ಸ್ವಾಮೀಜಿ ಅವರು ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡಲು ಸಾರ್ವಜನಿಕರು ಕೋವಿಸೀಲ್ಡ್ ಮತ್ತು ಕೊವ್ಯಾಕ್ಸಿನ್ ಚುಚ್ಚುಮದ್ದನ್ನು ತಪ್ಪದೇ ಪಡೆಯಲು ಕರೆ ನೀಡಿದರು.

ಜಗತ್ತಿನಲ್ಲಿ ಅನೇಕ ಶತಮಾನಗಳ ಹಿಂದಿನಿಂದಲೂ ಸಾವಿರಾರು ರೋಗ ರುಜಿನಿಗಳು ಮಾನವನಿಗೆ  ಸಂಭವಿಸಿವೆ ಯಾವುದಕ್ಕೊ ಭಯಬೀತನಾಗದೇ ಎದುರಿಸಿ ಅವುಗಳಿಗೇ ಔಷಧಗಳನ್ನು ಬಳಸಿ ಗುಣ ಪಡಿಸಿವೆ ಅದರಂತೆಯೇ ಇಂದು ಇಡೀ ಭೂಮಂಡಲವನ್ನೇ ವಕ್ಕರಿಸಿದ ಕರೊನಾ ಸಾಂಕ್ರಾಮಿಕ ಮಾಹಮಾರಿ ರೋಗ ತಲ್ಲಣಗೊಳಿಸಿದೆ ಇದಕ್ಕೆ ಯಾವ ಮಾನವ ಜೀವಿಯಾಗಲಿ ಅಥವಾ ಯಾವುದೇ ಇನ್ನಿತರ ಜೀವಿಯಾಗಲಿ ಭಯಪಡುವ ಅಗತ್ಯವೇ ಇಲ್ಲ ಏಕೆಂದರೆ ಮಾನವನ ಸೃಷ್ಟಿ ದೈವೀ ಇಚ್ಚೆಯಾಗಿದೆ ಸಾವಿರಾರು ರೋಗಗಳನ್ನು ಗೆದ್ದು ಬಂದಿರವ ಮಾನವ ಈ ಕರೊನಾ ಸಾಂಕ್ರಾಮಿಕ ರೋಗ ಗೆಲ್ಲಕ್ಕಾಗಲ್ವಾ? ನೀವು ಮೊದಲು ನಿಮ್ಮ ಮಾನಸಿಕ ಸ್ಥಿತಿಯನ್ನು ಗಟ್ಟಿಗೊಳಿಸಿಕೊಳ್ಳಿ ಆವಾಗ ಯಾವುದೇ ರೋಗ ಬಂದರೂ ಅದಕ್ಕೆ ಪ್ರತಿರೋಧವನ್ನು ತಾನೇ ತೋರುತ್ತದೆ ಜಗತ್ತಿನಲ್ಲಿ ಅನೈತಿಕ, ಅರಾಜಕತೆ, ಅಕ್ರಮ, ಮಾನವ ಸಂಬಂಧಗಳಲ್ಲಿ ಅಸೂಯೆ ಹಾಗೂ ಡಾಂಬಿಕ ಜೀವನ ಹೆಚ್ಚಾಗಿ ಕಂಡುಬರುತ್ತಿದೆ ಇದರಿಂದ ಸಾವು ನೋವು ಸಂಭಾವ್ಯ ಅಧಿಕವಾಗಿದೆ ಅದ್ದರಿಂದ ಜಗತ್ತಿನಲ್ಲಿ ತಾನೇ ಬುದ್ದಿ ಜೀವಿ ಶ್ರೇಷ್ಠ ಜೀವಿ ಎಂದು ಮೆರೆಯುತ್ತಿರುವ ಮಾನವ ತನ್ನ ಅಹಂಕಾರದ ಭಾವನೆ ಬಿಟ್ಟು ಹಿರಿಯರಿಗೆ ಗೌರವ, ಕಿರಿಯರಿಗೆ ಸನ್ಮಾರ್ಗದ ಸಲಹೆ ಹಾಗೂ ಪತಿಪತ್ನಿ,ಸ್ನೇಹಿತರ, ಸಂಬಂಧಿಕರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯ ಸಹಬಾಳ್ವೆ ನಡೆಸಬೇಕು ಅಲ್ಲದೆ ಭಗವಂತನಲ್ಲಿ ವಿಧೇಯತೆ ಭಾವ ತೋರಬೇಕು ಅಧಿಕಾರ, ಹಣದ ವ್ಯಾಮೋಹ ತೊರೆಯಿರಿ ಯಾವುದು ಶಾಶ್ವತವಲ್ಲ ಅದ್ದರಿಂದ ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ ಸಾಧಿಸಲು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸದಸ್ಯರಿಗೆ ಕಡ್ಡಾಯವಾಗಿ ಕೋವಿಸೀಡ್ ಮತ್ತು ಕೊವ್ಯಾಕ್ಸಿನ್ ಚುಚ್ಚುಮದ್ದು ಹಾಕಿಸಿ ಅಲ್ಲದೆ ನಿಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೆ ಲಸಿಕೆ ಪಡೆಯಲು ಸಲಹೆ ಸೂಚನೆಗಳನ್ನು ನೀಡಿ ಪ್ರೇರೇಪಣೆ ಮಾಡಿ ಇದರ ಜೊತೆಗೆ ಸರ್ಕಾರದ ಲಾಕ್ ಡೌನ್ ನೀತಿ ನಿಯಮಗಳಾದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸೋಣ ಎಂದು ಇಂದು ಗಬ್ಬೂರು ಪಟ್ಟಣದ ಸಾರ್ವಜನಿಕ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನೇಷನ್‌ ಪಡೆಯಲು ಬೇಟಿ ನೀಡಿದ ರಾಯಚೂರು ತಾಲ್ಲೂಕಿನ ಸುಲ್ತಾನಪೂರ ಗ್ರಾಮದ ಬೃಹನ್ಮಠ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಶಂಭು ಸೋಮನಾಥ ಸ್ವಾಮೀಜಿ ಅವರು ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡಲು ಸಾರ್ವಜನಿಕರು ಕೋವಿಸೀಲ್ಡ್ ಮತ್ತು ಕೊವ್ಯಾಕ್ಸಿನ್ ಚುಚ್ಚುಮದ್ದನ್ನು ತಪ್ಪದೇ ಪಡೆಯಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚ್ಚಯ್ಯ ಅಜ್ಜ ಕಂಬಿ,ಡಾ.ಪ್ರತೀಭಾ ಪಾಟೀಲ್,ಆರೋಗ್ಯ ಸಿಬ್ಬಂದಿಗಳಾದ ಮಂಜುನಾಥ ಮಾಲಿಪಾಟೀಲ್,ಬೀಬಿ ಫಾತೀಮಾ,ಶಿವಶರಣ ಇನ್ನಿತರರು ಭಾಗಿಯಾಗಿದ್ದರು.

Share and Enjoy !

Shares