ಅಭಯ್ ತಂಡದಿಂದ ಬಡ ಆರ್ಯವೈಶ್ಯರಿಗೆ ರೇಶನ್ ಕಿಟ್ ವಿತರಣೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ:
ಸಿರುಗುಪ್ಪ: ನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ ಅಭಯ ಫೌಂಡೇಷನ್ ವತಿಯಿಂದ ಬಡ ಆರ್ಯವೈಶ್ಯ ಕುಟುಂಬದವರಿಗೆ ರೇಶನ್ ಕಿಟ್ ನೀಡಲಾಯಿತು.
ಅಭಯ ಫೌಂಡೇಶನಿನ ಜಿಲ್ಲಾಧ್ಯಕ್ಷ ರಾಮಕೃಷ್ಣ ರೇಣಿಗುಂಟ ಇವರ ಮಾರ್ಗದರ್ಶನದಲ್ಲಿ ಸಿರುಗುಪ್ಪ ನಗರದ ಬಾದರ್ಲಿ ದತ್ತಾತ್ರೇಯ ಹಾಗೂ ರಾಘವೇಂದ್ರ ಇವರುಗಳು ಆರ್ಥಿಕವಾಗಿ ಹಿಂದುಳಿದಿರುವ ಆರ್ಯವೈಶ್ಯ
ಕುಟುಂಬಗಳಿಗೆ ಅಕ್ಕಿ ಬೇಳೆ ಎಣ್ಣೆ ಸೇರಿದಂತೆ ಪಡಿತರ ಸಾಮಾನುಗಳುಳ್ಳ ಆಹಾರದ ಕಿಟ್ ಗಳನ್ನು ವಿತರಿಸಿದರು.
ಅಭಯ ಫೌಂಡೇಶನಿನ ತಾಲೂಕು ಕಾಳಜಿದಾರ ಬಾದರ್ಲಿ ದತ್ತಾತ್ರೇಯ ಮಾತನಾಡಿ ಆರ್ಯವೈಶ್ಯರು ಎಂದಾಕ್ಷಣ ಸಾಮಾನ್ಯವಾಗಿ ಅನೇಕರು ಸ್ಥಿತಿವಂತರಿರುತ್ತಾರೆಂದು ಭಾವಿಸುತ್ತಾರೆ. ಆದರೆ ನಮ್ಮಲ್ಲಿಯೂ ಅತ್ಯಂತ ಕಡು ಬಡವರಿದ್ದಾರೆ. ಸಾಲಗಳನ್ನು ಮಾಡಿಕೊಂಡು ಅದಕ್ಕಾಗಿಯೇ ಜೀವನ ಸವೆಸುವವರೂ ಇದ್ದಾರೆ ಅವರುಗಳಿಗೆ ಕೊರೋನಾ ಮಹಾಮಾರಿಯ ಭೀತಿ ಮತ್ತು ಲಾಕ್ ಡೌನ್ ನ ಈ ಸಮಯದಲ್ಲಿ ಅವರ ಕಷ್ಟ ಮತ್ತು ಸಂಕಟಗಳಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎಂದು ಅವರಗಳ ವಿವರ ಪಡೆದು ಆಹ್ವಾನಿಸಿ ಆಹಾರದ ಕಿಟ್ ಗಳನ್ನು ನೀಡಿದ್ದೇವೆ ಎಂದರು.ರೇಶನ್ ಕಿಟ್ ವಿತರಣೆ ಸಂದರ್ಭದಲ್ಲಿ ಆರ್ಯವೈಶ್ಯ ಸಮಿತಿ ಅಧ್ಯಕ್ಷ ಬಾದ್ಮಿ ಜಯರಾಮ ಶೆಟ್ಟಿ, ಮುಖಂಡರುಗಳಾದ ಮುತ್ಯಾಲ ಶೆಟ್ಟಿ ಯು.ಸಿ. ರಾಮಾಂಜನೇಯ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.

Share and Enjoy !

Shares