ಮಸ್ಕಿ :ಶ್ರೀ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಆಹಾರ ಕಿಟ್ ವಿತರಣೆ.

Share and Enjoy !

Shares
Listen to this article

ಮಸ್ಕಿ : ಪಟ್ಟಣದ ಶ್ರೀ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಖಾಸಗಿ ಕಾಲೇಜು ಉಪನ್ಯಾಸಕರಿಗೆ, ಹೈಸ್ಕೂಲ್ ಶಿಕ್ಷಕರಿಗೆ, ಪ್ರೈಮರಿ ಶಿಕ್ಷಕರಿಗೆ ಮತ್ತು ಬಡ ಕುಟುಂಬಗಳಿಗೆ 101 ಆಹಾರದ ಕಿಟ್ ಗಳನ್ನು ಗಚ್ಚಿನ ಮಠ ಶ್ರೀ ವರರುದ್ರಮುನಿ ಸ್ವಾಮಿಗಳು, ಪ್ರತಾಪ್‌ ಗೌಡ ಪಾಟೀಲ್ ಮಸ್ಕಿ ಮತ್ತು ಬ್ಯಾಂಕ್ ನ ಅಧ್ಯಕ್ಷ ಸೂಗಣ್ಣ ಬಾಳೇಕಾಯಿ ಮಸ್ಕಿ ವಿತರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಶಾರದಾ ಪ್ರೌಢ ಶಾಲೆ ಮುಖ್ಯಗುರುಗಳಾದ ಮಲ್ಲಿಕಾರ್ಜುನ್ ಹಿರೇಮಠ ಅವರು, ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಬಡವರಿಗೆ, ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಇಂತಹ ಸಹಕಾರಿ ನಿಯಮಿತ ಸಂಸ್ಥೆಗಳನ್ನು ನೋಡುವುದು ಇದೇ ಮೊದಲು ಎಂದರು.

ಈ ಕಾರ್ಯಕ್ರಮದಲ್ಲಿ ಗುರುರಾಜ ಹಂಚಿನಾಳ,ಸುರೇಶ ಅರಳಿ, ಸಂತೋಷ ಬಾಳೇಕಾಯಿ,ಬಸವರಾಜ ಬುಕ್ಕಣ್ಣ, ಬಸವರಾಜ ನಾಯಕ ಕಡಬೂರು ಹಾಗೂ ಬ್ಯಾಂಕ್ ನ ಎಲ್ಲ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು 101 ಆಹಾರದ ಕಿಟ್ ಗಳನ್ನು ವಿತರಿಸಿದರು.

 

Share and Enjoy !

Shares