ವಿಜಯನಗರವಾಣಿ ಸುದ್ದಿ
ಸಿರುಗುಪ್ಪ: ನಗರದ ಆದೋನಿ-ಸಿಂಧನೂರು ಬೈಪಾಸ್ ರಸ್ತೆಯ ಬಳಿ ಇರುವ ಚರ್ಚ್ ಆಫ್ ಸೌಥ್ ಇಂಡಿಯಾ (ಸಿ.ಎಸ್.ಐ)ದ ಪುನರುತ್ಥಾನ ದೇವಾಲಯದ ಜೀಸಸ್ ವರ್ಷಿಪ್ ತಂಡದವರು ಶನಿವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.
ಕೊರೋನಾ 2ನೇ ಅಲೆಯ ಅಬ್ಬರ ಹೆಚ್ಚಾಗಿರುವುದರಿಂದ ಕೊವಿಡ್ ಪಾಸಿಟಿವ್ ಸೋಂಕಿತರ ಉಪಯೋಗಕ್ಕೆ ಅವಶ್ಯವಾಗಿ ಬೇಕಾಗಿರುವ ರೆಮೆಡಿರಿಸಿವರ್ ಇಂಜೆಕ್ಷನ್ ಗೆ ಬಳಸುವ 200 ಎನ್. ಎಸ್. ಬಾಟಲಿಗಳನ್ನು ಆಸ್ಪತ್ರೆಯ ಉಪಯೋಗಕ್ಕಾಗಿ ಅಲ್ಲಿನ ಮುಖ್ಯಾಡಳಿತ ವೈದ್ಯಾಧಿಕಾರಿ ಡಾ.ದೇವರಾಜರಿಗೆ ನೀಡಿದರು.