ವಿಜಯನಗರ ವಾಣಿ ಸುದ್ದಿ : ರಾಯಚೂರು
ಗಬ್ಬೂರು:- ದೇಶದ ಯಾವುದೇ ಮೂಲೆಗೆ ಹೋದರೂ ಚಮ್ಮಾರರು ಸಿಗುತ್ತಾರೆ. ಬಿಸಿಲಿರಲಿ, ಮಳೆ ಬರಲಿ ರಸ್ತೆ ಪಕ್ಕದಲ್ಲಿ ಕುಳಿತು ತಮ್ಮ ಕಾಯಕ ನೆರವೇರಿಸೋ ಕಾಯಕ ಜೀವಿಗಳು ಚಮ್ಮಾರರು. ಆದರೆ ಲಾಕ್ಡೌನ್ನಿಂದಾಗಿ ಚಮ್ಮಾರರ ಬದುಕು ಸಂಕಷ್ಟಕ್ಕೀಡಾಗಿದೆ. ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಖಾನಾಪೂರ ಗ್ರಾಮದ ಪರಶುರಾಮ ತಂದೆ ಭೀಮಪ್ಪ ಅವರ ಕಳೆದ ಐದು ವರ್ಷಗಳಿಂದ ಅಂಗವಿಕಲರಾಗಿದ್ದು ಇವರಿಗೆ ಯಾವುದೇ ಅಂಗವಿಕಲ ವೇತನಕ್ಕಾಗಿ ಹತ್ತಾರು ಬಾರೀ ಅರ್ಜಿ ಸಲ್ಲಿಸಿದರು ಅಧಿಕಾರಿಗಳು ತಿರಸ್ಕರಿಸಿದ್ದು ಖಂಡನೀಯ ಇಂತಹ ಲಾಕ್ ಡೌನ್ ಸಮಯದಲ್ಲಿ ನಮಗೆ ಬದುಕುವುದು ಕಷ್ಟವಾಗಿದೆ.
ಪರಶುರಾಮನಿಗೆ ಅಂಗಡಿ ಹಾಕಲು ಆಗಿದೆ ಮನೆ ಪಕ್ಕದಲ್ಲಿ ಕುಳಿತರೂ ಅವರ ಬಳಿ ಜನ ಬಂದು ಚಪ್ಪಲಿ ರಿಪೇರಿ, ಮಾಡಿಸಿಕೊಳ್ಳಲು ಹೆದರುತ್ತಿದ್ದಾರೆ. ನಿತ್ಯ 100ರಿಂದ 200 ರೂ. ದುಡಿಯುತ್ತಿದ್ದ ಚಮ್ಮಾರನ ಕೈಗೆ ಈಗ ಯಾವುದೇ ಆದಾಯ ಸಿಗೋದು ಡೌಟ್ ಎನ್ನುವಂತಾಗಿದೆ.
ನಿತ್ಯ ದುಡಿದರೆ ಮಾತ್ರ ತುತ್ತು ಅನ್ನ ಎನ್ನುವ ಸ್ಥಿತಿ ಚಮ್ಮಾರನದ್ದು. ಆತನ ದುಡಿಮೆಯ ಮೇಲೆಯೇ ಆತನು ಅವಲಂಬಿಸಿದ್ದಾನೆ. ಇವರಿಗೆ ಆದಾಯವಿಲ್ಲದಿರುವಾಗ ಕುಟುಂಬದ ಪೋಷಣೆ ಹೇಗೆ ಎನ್ನೋ ಪ್ರಶ್ನೆ ಎದುರಾಗಿದೆ.
ಒಂದು ಹೊತ್ತಿನ ಊಟಕ್ಕೂ ಸಾಲದಂತಾಗಿದೆ. ಹೀಗಿರಬೇಕಾದರೆ ತನಗೆ ಔಷಧಿ ತಂದು ಕೊಡೋದಾದ್ರೂ ಹೇಗೆ ಎಂದು ಚಮ್ಮಾರ ಪರಶುರಾಮ ಎಂಬುವರು ಅಳಲು ತೋಡಿಕೊಂಡಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟದಲ್ಲಿ ಚಮ್ಮಾರರ ಬದುಕು ಲಾಕ್ಡೌನ್ನಿಂದ ಸಂಕಷ್ಟದಲ್ಲಿ ಚಮ್ಮಾರರ ಬದುಕು ಒಟ್ಟಾರೆ ಕೊರೊನಾ ಲಾಕ್ಡೌನ್ ಬಡವರಿಗೆ, ದುಡಿಯುವ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಿದೆ.
ಚಮ್ಮಾರರ ಬದುಕಿಗೆ ಅಡಚಣೆಯುಂಟು ಮಾಡಿದೆ. ಸರ್ಕಾರ ಚಮ್ಮಾರರ ಕುಟುಂಬಕ್ಕೆ ವಿಶೇಷ ಪ್ಯಾಕೇಜ್ ನೀಡಿ ಹಾಗೂ ಲಿಡ್ಕರ್ ಅಭಿವೃದ್ಧಿ ನಿಗಮದಿಂದ ಸಹಾಯ ಧನ ನೀಡಬೇಕು, ಯಾರಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಾಯ ಮಾಡಬೇಕು, ಅಂಗವಿಕಲ ಪರಶುರಾಮಗೆ ನೆರವಾಗಬೇಕೆಂದು ಚಮ್ಮಾರರು ಸರ್ಕಾರವನ್ನು ಅಂಗಲಾಚುತ್ತಿದ್ದಾರೆ.