ಪತ್ರಕರ್ತರನ್ನು ವಿಮಾ ಸೌಲಭ್ಯಕ್ಕೆ ಒಳಪಡಿಸಿ ಆರ್ಥಿಕ ನೆರವು ನೀಡಿ!

Share and Enjoy !

Shares
Listen to this article

ಕುರುಗೋಡು:ಬಳ್ಳಾರಿಜಿಲ್ಲೆ
ವಿಜಯನಗರಾಧ್ಯಂತ ಪ್ರತಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ವಿಮಾ ಸೌಲಭ್ಯಕ್ಕೆ ಒಳಪಡಿಸಿ ಅವರಿಗೆ ಆರ್ಥಿಕ ನೆರವು ಕಲ್ಪಿಸುವಂತೆ ಒತ್ತಾಯಿಸಿ ಕುರುಗೋಡು ತಾಲೂಕು ಕಾರ್ಯನಿರತ ಪತ್ರಕರ್ತರು ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ವಿಜಯಕುಮಾರ್ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ರವನಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸುಧಾಕರ್ ಮಣ್ಣೂರು ಮಾತನಾಡಿ,ರಾಜ್ಯಾಧ್ಯಂತ ಇರುವ ಪತ್ರಕರ್ತರನ್ನು ಕೊರೋನಾ ವಾರಿಯರ್ಸ್ ಗೆ ದೊರೆಯುವಂತ ವಿಮಾ ವ್ಯಾಪ್ತಿಗೆ ಒಳಪಡಿಸಬೇಕು ಕೇವಲ ಆಧ್ಯತೆ ಮೇರೆಗೆ ಲಸಿಕೆಗೆ ಮಾತ್ರ ಸೀಮಿತಗೊಳಿಸಬಾರದು.ಇನ್ನು ಬಳ್ಳಾರಿ ಜಿಲ್ಲೆಯ ಡಿ.ಎಂ.ಎಫ್. ಅನುದಾನದಡಿಯಲ್ಲಿ ಸಂಕಷ್ಟದಲ್ಲಿರುವ ಬಳ್ಳಾರಿ ಹಾಗೂ ವಿಜಯನಗರದ ಪ್ರತಿ ತಾಲೂಕಿನ ಪತ್ರಕರ್ತರುಗಳಿಗೆ ಹತ್ತು ಸಾವಿರ ರೂ ಗಳ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯನಿರತ ಸಮಿತಿಯು ಮುಖ್ಯಮಂತ್ರಿಗಳಿಗೆ ಹಲವು ಬಾರಿ ಬೇಡಿಕೆಗಳು ಈಡೇರಿಸುವಂತೆ ಮನವಿ ಮಾಡಿದರು ಯಾವುದೇ ಗಮನಹರಿಸುತ್ತಿಲ್ಲ ಕೂಡಲೇ ಸರಕಾರ ಪತ್ರಕರ್ತರ ನೆರವಿಗೆ ಧಾವಿಸಬೇಕು ಎಂದರು.
ಗೌರವಧ್ಯಕ್ಷ ಕೆ. ಭೀಮಣ್ಣ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಪತ್ರಕರ್ತರ ಜೀವನ ಎಳತಿರಾದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೀವದ ಅಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಸರಕಾರದಿಂದ ಯಾವುದೇ ಸೌಲಭ್ಯ ನೀಡದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರ ಶೀಘ್ರವೇ ಪತ್ರಕರ್ತರಿಗೆ ವಿಮಾ ಸೌಲಭ್ಯ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದು ಹೇಳಿದರು.
ಈ ವೇಳೆ ಪತ್ರಕರ್ತರಾದ ರಾಮಯ್ಯ, ಸತೀಶ್, ಪಂಪನಗೌಡ, ಬಸಯ್ಯ ಸ್ವಾಮಿ ಸೇರಿದಂತೆ ಇತರರು ಇದ್ದರು.

Share and Enjoy !

Shares