ವಿಜಯನಗರ ವಾಣಿ ಸುದ್ದಿ : ಮಂಡ್ಯ ಜಿಲ್ಲೆ
ಮಂಡ್ಯ: ಮಂಡ್ಯ ಜಿಲ್ಲೆಯ ಕ್ರೀಡಾಪಟುಗಳಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಈಗಾಗಲೆ ಜಿಲ್ಲಾ ಕ್ರೀಡಾಂಗಣವನ್ನು 10 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ ಗೊಳಿಸಲು ತೀರ್ಮಾನಿಸಲಾಗಿದೆ. ಅದರ ಜೊತೆಗೆ ಈಗ ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲು ಆದೇಶಿಸಿದೆ. ಜಿಲ್ಲಾ ಉಸ್ತುವಾರಿ ಹಾಗೂ ಯುವ ಸಬಲೀಕರ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರ ಇಚ್ಛಾಶಕ್ತಿಯಿಂದ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಯಾಗುತ್ತಿದೆ.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಕ್ರೀಡಾಂಗಣ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿದ್ದ ಸಚಿವರು, ಖೇಲೋ ಇಂಡಿಯಾ ಯೋಜನೆ ಅಡಿ ಖೇಲೊ ಇಂಡಿಯಾ ಕೇಂದ್ರವನ್ನು ಸ್ಥಾಪಿಸಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ಕಾರ್ಯ ಮಾಡಿರುವ ಸಚಿವ ಡಾ. ನಾರಾಯಣಗೌಡ ಅವರು ಈಗ ಮಂಡ್ಯ ಜಿಲ್ಲೆಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರುವಂತೆಯೆ ಮಂಡ್ಯ ಜಿಲ್ಲೆಯಲ್ಲೂ 2 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಯಾಗುತ್ತಿದೆ. ಕ್ರೀಡಾ ಪಟುಗಳಲ್ಲಿ ಇರುವ ಕ್ರೀಡಾ ಸಾಮಥ್ರ್ಯವನ್ನು ವೈಜ್ಞಾನಿಕವಾಗಿ ಗುರುತಿಸಿ ಸೂಕ್ತ ತರಬೇತಿ ನೀಡಲು ಇದು ಸಹಕಾರಿಯಾಗಲಿದೆ.
ಗ್ರಾಮೀಣ ಭಾಗದ ಕ್ರೀಡಾ ಪಟುಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಉದ್ದೇಶದಿಂದಲೇ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಅದರಲ್ಲು ಪ್ರಮುಖವಾಗಿ ಮಂಡ್ಯ, ಮೈಸೂರು ಭಾಗದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಕೇಂದ್ರ ಸ್ಥಾಪನೆ ಆಗುವುದರಿಂದ ವೈಜ್ಞಾನಿಕವಾಗಿ ಕ್ರೀಡಾ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗುವುದು. ಪರಿಣಿತ ತರಬೇತುದಾರರಿಂದ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಕೂಡ ದೊರೆಯಲಿದೆ.
ಇದರಿಂದ ಮಂಡ್ಯ, ಮೈಸೂರು, ಹಾಸನ, ಕೊಡಗು ಭಾಗದ ಯುವ ಪ್ರತಿಭೆಗಳಿಗೆ ಕ್ರೀಡೆಯಲ್ಲಿ ಸಾಧನೆ ತೋರಲು ಕ್ರೀಡಾ ವಿಜ್ಞಾನ ಕೇಂದ್ರ ನೆರವಾಗಲಿದೆ. ಅತಿ ಶೀಘ್ರದಲ್ಲಿ ಕೇಂದ್ರ ಆರಂಭವಾಗಲಿದ್ದು, ಗ್ರಾಮೀಣ ಪ್ರತಿಭೆಗಳು ಕ್ರೀಡೆಯತ್ತ ಹೆಚ್ಚಿನ ಗಮನ ಹರಿಸಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಹೆಸರು ತರಬೇಕು. ಆಗ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಕ್ರೀಡಾ ವಿಜ್ಞಾನ ಕೇಂದ್ರ ನೀಡಿದ್ದಕ್ಕಾಗಿ ಸಚಿವ ಡಾ. ನಾರಾಯಣಗೌಡ ಅವರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ವಿವಿಧ ವಿಭಾಗದಲ್ಲಿ ದೊರೆಯಲಿರುವ ಸೌಲಭ್ಯಗಳು:-
ಬಯೊಮೆಕ್ಯಾನಿಕ್ ಮತ್ತು ಕೈನಿಸೊಲಜಿ ಜೊತೆಗೆ ಅಥ್ಲೀಟ್ ಮೊನಿಟರಿಂಗ್ ಸಾಫ್ಟ್ವೇರ್, ಫಿಸಿಯೊಥೆರಪಿ ಉಪಕರಣಗಳು, ಸೈಕೊಲಾಜಿ, ಸ್ಪೋಟ್ರ್ಸ್ ಸೈಕೊಲೊಜಿ, ಫಿಟ್ನೆಸ್ ಸಾಧನಗಳು ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ದೊರೆಯಲಿದೆ. ಈ ಎಲ್ಲ ಸೌಲಭ್ಯಗಳ ಮೂಲಕ ಕ್ರೀಡಾ ಪಟುಗಳನ್ನು ಆರಂಭಿಕ ಹಂತದಲ್ಲೇ ವೈಜ್ಞಾನಿಕವಾಗಿ ಗುರುತಿಸಿ, ಅವರ ಮನೋಸಾಮಥ್ರ್ಯ ಹಾಗೂ ದೈಹಿಕ ಬಲಕ್ಕೆ ಅನುಗುಣವಾಗಿ ಕ್ರೀಡೆಗಳ ಆಯ್ಕೆ ಮಾಡಿ, ಉತ್ತೇಜನ ನೀಡಲಾಗುವುದು ಎಂದರು..