ಅಜೀಂ ಪ್ರೇಂಜಿ ಫೌಂಡೇಶನ್ ವತಿಯಿಂದ ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ.

Share and Enjoy !

Shares
Listen to this article

ಹೂವಿನಹಡಗಲಿ: ಪಟ್ಟಣದಲ್ಲಿ ಇಂದು ಅಜೀಂ ಪ್ರೇಂಜಿ ಫೌಂಡೇಶನ್ ವತಿಯಿಂದ ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ ತಹಸೀಲ್ದಾರ್ ಮಹೇಂದ್ರಪ್ಪ , ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯು.ಹೆಚ್. ಸೋಮಶೇಖರ, ಮಾತನಾಡಿದ ತಾಲೂಕು ತಹಸೀಲ್ದಾರ್ ಮಹೇಂದ್ರಪ್ಪ ಮಾತನಾಡಿ “ಕೋವಿಡ್ ಸಮಯದ, ಸಂದಿಗ್ಧ ಸ್ಥಿತಿಯಲ್ಲಿ, ಕಡು ಬಡವರನ್ನು ಗುರುತಿಸಿ, ಸಹಾಯ ಮಾಡುತ್ತಿರುವ ಇಂತಹ ಸಂಸ್ಥೆಯ ಕಾರ್ಯ ವೈಖರಿ ಎಲ್ಲದಕ್ಕೂ ಮೆಚ್ಚುವಂತಹದ್ದು. ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್ ರೂಪದಲ್ಲಿ, ಅವರು ಬದುಕು ನಡೆಸಲು ಅನುಕೂಲ ಮಾಡುತ್ತಿರುವ ಸಂಸ್ಥೆಯು ಇನ್ನೂ ಹೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು. ತಾಲೂಕು ಪಂಚಾಯಿತಿ ಅಧಿಕಾರಿ ಸೋಮಶೇಖರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ,ಇಂದು ಜನರ ಜೀವನ ಕೋವಿ ಡ್ ನಡುವೆ ಸಿಲುಕಿದೆ. ಬಡ ಜನರ ಬದುಕು ತುಂಬಾ ಕಷ್ಟ. ಇವರನ್ನು ಗುರುತಿಸಿ, ಕಷ್ಟ ಕಾಲದಲ್ಲಿ ಮಾಡುವ ಸಹಾಯ, ದೇವರನ್ನು ತೃಪ್ತಿ ಪಡಿಸಿದಂತೆ ಎಂದರು. ಈ ಸಂದರ್ಭದಲ್ಲಿ ಎ.ಐ.ಟಿ.ಯು.ಸಿ. ತಾಲೂಕು ಸಂಚಾಲಕ ಹಲಗಿ ಸುರೇಶ್, ಹಾಲನಗೌಡ್ರ, ಐರಣಿ ಜಗದೀಶ್,ತಾ.ಪಂ. ಸಿಬ್ಬಂದಿಗಳು ಸೇರಿದಂತೆ ದೇವದಾಸಿ ಮಹಿಳೆಯರು ಉಪಸ್ಥಿತರಿದ್ದರು.

Share and Enjoy !

Shares