ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನವೂ ಗಗನಕ್ಕೇರುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ :ಮಾಜಿ ಶಾಸಕಎಂ.ಡಿ.ಲಕ್ಷ್ಮೀನಾರಾಯಣ ಆರೋಪ

Share and Enjoy !

Shares
Listen to this article

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನವೂ ಗಗನಕ್ಕೇರುತ್ತಿದ್ದು ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ.
ದೇಶವನ್ನು ರಾಮರಾಜ್ಯ ಮಾಡುವುದಾಗಿ ಹೇಳಿ ಅಧಿಕಾರ ಹಿಡಿದು ಇವತ್ತು ಜನರು ದಿನ ನಿತ್ಯ ಬಳಸುವ ಎಲ್ಲಾ ಪದಾರ್ಥಗಳು ಕೈಗೆಟಕುವ ಪರಿಸ್ಥಿತಿ ಇಲ್ಲದಂತಾಗಿದೆ. ಬಡ ಜನರ ಶಾಪ ಅಷ್ಟಿಷ್ಟಲ್ಲ .ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ಪೆಟ್ರೋಲ್ ದರ ಕೇವಲ 1 ರೂಪಾಯಿ ಜಾಸ್ತಿಯಾದ ಸಂದರ್ಭದಲ್ಲಿ ರಸ್ತೆಯಲ್ಲಿ ಸೈಕಲ್ ಮೇಲೆ ರಾಜಭವನ ಮುತ್ತಿಗೆ ಹಾಕಲು ಹೊರಟು ಒಳಗಡೆ ಬಿಡದಿದ್ದಾಗ ರಾಜಭವನದ ಮುಂದೆ ಮಲಗಿ ಧರಣಿ ಸತ್ಯಾಗ್ರಹ ಮಾಡಿ ರಂಪ ಮಾಡಿದ್ದನ್ನು ಜನ ಮರೆತಿಲ್ಲ. ಆದರೆ ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದ್ದು ಜನರ ಸಂಕಷ್ಟ ಮರೆತಿರುವ ಸರ್ಕಾರ ಗಳು ಹಾಗೂ ಅತೀ ಹೆಚ್ಚು ಲೋಕಸಭಾ ಸದಸ್ಯರುಗಳು ಜನರು ಶಾಪ ಹಾಕುವ ಮೊದಲು ಕೂಡಲೇ
ದರಗಳನ್ನು ಕಡಿಮೆ ಮಾಡುವಂತೆ ಪ್ರಧಾನ ಮಂತ್ರಿಗಳಿಗೆ ಒತ್ತಾಯ ತರಬೇಕೆಂದು
ಎಂ.ಡಿ.ಲಕ್ಷ್ಮೀನಾರಾಯಣ(ಅಣ್ಣಯ್ಯ) ಮಾಜಿ ಶಾಸಕರು ತುರುವೇಕೆರೆ ಕ್ಷೇತ್ರ.
ಅಧ್ಯಕ್ಷರು- ಹಿಂದುಳಿದ ವರ್ಗಗಳ ವಿಭಾಗ ಪ್ರ.ಕಾ.ಸ. ಹಾಗೂ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ. ಇವರು
ಪತ್ರಿಕೆಯ ಮುಖಾಂತರ ಕೆಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Share and Enjoy !

Shares